ವಿಜೃಂಭಣೆಯ ದುರ್ಗದೌಡ್ ಮೆರವಣಿಗೆ

PHOTO-133
Published on

ಚಿತ್ರದುರ್ಗ:ನಗರದ ಕೆಳಗೋಟೆ ಅಂಬಾಭವಾನಿ ದೇವಸ್ಥಾನದಲ್ಲಿ ನಡೆದ ದೇವಿಯ ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ಮರಾಠ ವಿದ್ಯಾವರ್ಧಕ ಸಂಘದದಿಂದ ದುರ್ಗದೌಡ್ ಮೆರವಣಿಗೆ ಬುಧವಾರ ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿತು.

ರಂಗಯ್ಯನ ಬಾಗಿಲಿನಿಂದ ಹೊರಟ ಮೆರವಣಿಗೆ ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗದ ರಸ್ತೆಯಿಂದ ಸಾಗಿ ಆನೆಬಾಗಿಲು, ಗಾಂಧಿ ವೃತ್ತ,ಎಸ್.ಬಿ.ಎಂ.ಸರ್ಕಲ್,ಅಂಬೇಡ್ಕರ್‌ವೃತ್ತ,ಒನಕೆ ಓಬವ್ವ ಪ್ರತಿಮೆ ಮುಂಭಾಗದಿಂದ ಅಂಬಾಭವಾನಿ ದೇವಸ್ಥಾನ ತಲುಪಿತು. ಭಗವಾಧ್ವಜ ಹಿಡಿದು ಜೈಶ್ರೀರಾಮ,ಜೈಶಿವಾಜಿ ಎನ್ನುವ ಘೋಷಣೆಗಳನ್ನು ಕೂಗುತ್ತ ಸಾಗಿದರು.

ದಕ್ಷಿಣ ಕನ್ನಡದ ಚಂಡೆವಾದ್ಯ,ನಾಸಿಕ್‌ಡೋಲ್ ಮೆರವಣಿಗೆಗೆ ಮೆರಗು ನೀಡಿತು. ಮರಾಠ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್‌ಜಾದವ್, ಕಾರ‌್ಯದರ್ಶಿ ಗೋಪಾಲ್‌ರಾವ್ ಜಾಧವ್, ಬಿಜೆಪಿ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಫಿ ಕುಡಾ ಮಾಜಿ ಅಧ್ಯಕ್ಷರಾದ ಕೆ.ತಿಪ್ಪೇಸ್ವಾಮಿ,

ಟಿ.ಬದ್ರಿನಾಥ್,ಮರಾಠ ಸಮಾಜದ ರೋಹಿತ್ ಗಾಯಕ್‌ವಾಡ್,ಮಂಜುನಾಥ ಗಾಯಕ್‌ವಾಡ್, ಸತೀಶ್‌ಜಾಧವ್, ನಿತೀನ್ ಜಾಧವ್,ಕೃಷ್ಣೋಜಿರಾವ್‌ಮೋರೆ,ನಾಗರಾಜ್‌ಬೇದ್ರೆ,ಶಾರದಬಾಯಿ,ಕಲಾಬಾಯಿ,ಪದ್ಮಬಾಯಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net