ಮಾರಮ್ಮ ದೇವಾಲಯ ಹುಂಡಿ ಹಣ ಕಳವು

Crime Logo
Published on

ಬೆಂಗಳೂರು: ಪ್ರಸಿದ್ಧ ಬಾಗಲಗುಂಟೆ ಮಾರಮ್ಮ ದೇವಾಲಯದ ಬೀಗ ಒಡೆದಿರುವ ಕಳ್ಳರು ಹುಂಡಿ ಹಣ ಕಳ್ಳತನ ಮಾಡಿದ್ದಾರೆ.
ಮಂಗಳವಾರ ಬೆಳಗಿನ ಜಾವ ೩:೩೦ರ ಸುಮಾರು ದೇವಾಲಯದ ಬಂದಿರುವ ಕಳ್ಳರು ಹುಂಡಿಯಲ್ಲಿದ್ದ ಅಂದಾಜು ೭೦ ಸಾವಿರಕ್ಕೂ ಹೆಚ್ಚು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಅರ್ಚಕ ಮಹೇಂದ್ರ ಅವರು ಪೂಜೆ ಮಾಡಲು ದೇವಾಲಯಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಈ ಮಾರಮ್ಮ ದೇವಾಲಯವಿದ್ದು, ಸೂಕ್ತ ಭದ್ರತೆ ಕಲ್ಪಿಸದ ತಹಸಿಲ್ದಾರ್ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಬೀಟ್ ಹೆಚ್ಚಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ದೇವಾಲಯದಲ್ಲಿ ಎರಡು ಹುಂಡಿಗಳಿದ್ದು ಅದರಲ್ಲಿ ಚಿಕ್ಕ ಹುಂಡಿಯಲ್ಲಿದ್ದ ಸುಮಾರು ೭೦ ಸಾವಿರ ಕಳ್ಳತನ ಮಾಡಲಾಗಿದೆ. ದೊಡ್ಡ ಹುಂಡಿ ಕಳ್ಳತನ ಮಾಡಲು ಸಾಧ್ಯವಾಗದೇ ಪರಾರಿಯಾಗಿದ್ದಾರೆ. ಚಿನ್ನಾಭರಣ ಮತ್ತು ಬೆಳ್ಳಿ ಸೇರಿ ಸುಮಾರು ೧೨ ಲಕ್ಷ ರೂ. ದೇವಾಲಯದಲ್ಲಿ ಇದೆ. ಆರೋಪಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಅದನ್ನು ವಶಕ್ಕೆ ಪಡೆದು ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net