ವಿನಾಕಾರಣ ವಾಹನಗಳಿಗೆ ಕಲ್ಲೆಸೆದು ಹುಚ್ಚಾಟ; ಮಾಲೀಕರ ನಿದ್ದೆಗೆಡಿಸಿದ ಪುಂಡರು!

Vehicals
Published on

ಕಲಬುರಗಿ: ಮನೆ ಮುಂದೆ ನಿಲ್ಲಿಸಿದ ಕಾರು, ಬೈಕು, ಆಟೋಗಳಿಗೆ ದುಷ್ಕರ್ಮಿಗಳು ಕಾರಣವಿಲ್ಲದೆ ಕಲ್ಲೆಸೆದು ಹುಚ್ಚಾಟ ಮೆರೆದಿದ್ದಾರೆ. ಈ ಘಟನೆ ನಗರದ ಸಂತೋಷ್ ಕಾಲೋನಿಯಲ್ಲಿ ನಡೆದಿದ್ದು, ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ.

ದುಷ್ಕರ್ಮಿಗಳ ಆಟಾಟೋಪಕ್ಕೆ ಬೆಲೆ ಬಾಳುವ ಕಾರು, ಆಟೋ, ಬೈಕ್‌ನ ಗಾಜು ಪುಡಿಪುಡಿಯಾಗಿವೆ. ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ವಾಹನ ಮಾಲೀಕರು ಅಪರಾಧಿಗಳನ್ನು ಬಂಧಿಸಲು ಆಗ್ರಹಿಸುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಕೂಡ ದುಷ್ಕರ್ಮಿಗಳು ಇದೇ ರೀತಿ ಕಲ್ಲೆಸೆದಿದ್ದರು. ಈ ವೇಳೆ ಪೊಲೀಸರು ಯಾರನ್ನೂ ಬಂಧಿಸಿರಲಿಲ್ಲ. ಈಗಲೂ ಪೊಲೀಸರು ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net