ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆ ಜಾರಿ-ಸಂತೋಷ್ ಲಾಡ್|Women Empowerment

8 Dwd 3 Santosh Lad
Published on

ಬೆಂಗಳೂರು: ಮಹಿಳಾ ಸಬಲೀಕರಣಕ್ಕೆ ಸ್ತ್ರೀ ಶಕ್ತಿ, ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ,ಮಹಿಳಾ ಸಹಾಯವಾಣಿ ಸೇರಿದಂತೆ ಹಲವಾರು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ(Many schemes implemented for women empowerment) ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್(Santosh Lad) ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಚನ್ನಬಸಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ, ಚೇತನ, ಧನಶ್ರೀ, ಮಾಜಿ ದೇವದಾಸಿ ಮಹಿಳೆ ಪುನರ್ವಸತಿ ಮತ್ತು ವಸತಿ ನಿರ್ಮಾಣ, ಬಡ್ಡಿ ಸಹಾಯಧನ ಯೋಜನೆ, ಮಹಿಳಾ ತರಬೇತಿ, ವೃದ್ಧಿ, ಕಿರುಸಾ, ಮಹಿಳೆಯರಿಗೆ ಬಡ್ಡಿ ಸಹಾಯಧನ, ಆ್ಯಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ಸಾಲ ಸೌಲಭ್ಯಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಮಕ್ಕಳ ಹಕ್ಕು ರಕ್ಷಣೆ ಮಾಡುವಲ್ಲಿ ಪ್ರಸ್ತುತ ರಾಜ್ಯದಲ್ಲಿ 32 ಸರ್ಕಾರಿ ಬಾಲಕರ ಬಾಲಮಂದಿರ, 30ಸರ್ಕಾರಿ ಬಾಲಕಿಯರ ಬಾಲಮಂದಿರ, 0-6 ವರ್ಷದೊಳಗಿನ ಮಕ್ಕಳಿಗೆ 1 ಶಿಶುಮಂದಿರ, 4 ಬುದ್ದಿಮಾಂದ್ಯ ಮಕ್ಕಳ ಬಾಲಮಂದಿರ ಹಾಗೂ ಬಾಲಕರಿಗಾಗಿ 16 ವೀಕ್ಷಣಾಲಯ ಮತ್ತು ಬಾಲಕಿಯರಿಗಾಗಿ 1 ವೀಕ್ಷಣಾಲಯ, 21 ಸರ್ಕಾರಿ ವಿಶೇಷ ದತ್ತು ಸಂಸ್ಥೆಗಳು, 23 ಸರ್ಕಾರೇತರ ವಿಶೇಷ ದತ್ತು ಸಂಸ್ಥೆಗಳು, 29 ತೆರೆದ ತಂಗುದಾಣಗಳು, 32 ನಿರ್ಗತಿಕ ಮಕ್ಕಳ ಕುಟೀರ, 05 ಅರ್ಹ ಸಂಸ್ಥೆ ಮತ್ತು 7 ಅನುಪಾಲನಾ ಗೃಹಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net