ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಲವರಿಗೆ ಅನುಕೂಲ

IMG-20250325-WA0056
ಅಗಸರಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಗಸರಹಳ್ಳಿ ಚಂದ್ರೇಗೌಡ ಉದ್ಘಾಟಿಸಿದರು. ದೇವಾಂಗು, ಅರುಣ್‌ಕುಮಾರ್, ಪ್ರಸಾದ್, ಹೇಮೇಶ್, ಶುಂಠಿ ಶಂಕರ್, ವೆಂಕಟೇಶ್, ಸೌಮ್ಯಾ, ವಿಂದ್ಯಾ ಇದ್ದರು.
Published on

ಬಾಗೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಗಸರಹಳ್ಳಿ ಚಂದ್ರೇಗೌಡ ತಿಳಿಸಿದರು.

ಹೋಬಳಿಯ ಅಗಸರಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇಗುಲಗಳ ಜೀರ್ಣೋದ್ಧಾರ ಸಮಿತಿಗೆ ಧನಸಹಾಯ, ಶೌಚಗೃಹಗಳ ನಿರ್ಮಾಣ, ಕೆರೆ ಸಂರಕ್ಷಣೆಯಿಂದ ಅಂತರ್ಜಲ ಅಭಿವೃದ್ಧಿ, ಸೌರವಿದ್ಯುತ್ ಘಟಕಗಳ ನಿರ್ಮಾಣ, ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ವೇತನ, ಗೋಬರ್ ಗ್ಯಾಸ್‌ಗಳ ಬಳಕೆ, ಮದ್ಯವರ್ಜನ ಶಿಬಿರದಿಂದ ಲಕ್ಷಾಂತರ ಕುಟುಂಬಕ್ಕೆ ನೆಮ್ಮದಿ, ಡೇರಿ ಕಟ್ಟಡಗಳ ನಿರ್ಮಾಣಕ್ಕೆ ಧನಸಹಾಯ, ಸ್ವ ಉದ್ಯೋಗ ತರಬೇತಿ ಶಿಬಿರಗಳಿಂದ ಯುವಕರಿಗೆ ಅನುಕೂಲ, ನಿರ್ಗತಿಕರಿಗೆ ಮಾಸಾಶನ, ಮನೆ ಇಲ್ಲದವರಿಗೆ ಸೂರು, ಶಾಲೆಗಳಿಗೆ ಟೇಬಲ್‌ಗಳ ಕೊಡುಗೆ, ಅಂಗವಿಕಲರಿಗೆ ವೀಲ್‌ಚೇರ್ ವಿತರಣೆ ಹೀಗೆ ಹಲವಾರು ಯೋಜನೆಗಳಿಂದ ಸಹಾಯ ಮಾಡುತ್ತಿರುವ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರು ಈ ನಾಡಿನಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ದೇವಾಂಗ್, ಪಿಡಿಒ ಅರುಣ್‌ಕುಮಾರ್, ತಾಲೂಕು ಯೋಜನಾಧಿಕಾರಿ ಪ್ರಸಾದ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹೇಮೇಶ್, ಗ್ರಾಮದ ಮುಖಂಡರಾದ ಶುಂಠಿ ಶಂಕರ್, ವೆಂಕಟೇಶ್, ಸಮನ್ವಯ ಅಧಿಕಾರಿ ಎಂ. ಸೌಮ್ಯಾ, ವಿಂದ್ಯಾ, ಉದಯಪುರ ವಲಯದ ಸೇವಾ ಪ್ರತಿನಿಧಿಗಳು ಸಂಘದ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net