ಚಂದ್ರಯಾನದಲ್ಲಿ ಅನೇಕರ ಶ್ರಮ: ಇಸ್ರೋ ವಿಜ್ಞಾನಿ ಶಿವಾಣಿ

shivani
ಇಸ್ರೋ ಚಂದ್ರಯಾನ ಯಶಸ್ಸಿಗೆ ದುಡಿದ ವಿಜ್ಞಾನಿ ಶಿವಾಣಿ ಅವರನ್ನು ಶಿವಮೊಗ್ಗದಲ್ಲಿ ಸನ್ಮಾನಿಸಲಾಯಿತು. ಕೋಣಂದೂರು ಲಿಂಗಪ್ಪ, ವಾಗೇಶ್, ಜಿ.ವಿಜಯಕುಮಾರ್, ಡಾ. ಶೇಖರ್ ಗೌಳೇರ್, ನಾಗರಾಜ್, ಡಾ. ಕೌಸ್ತುಭಾ ಇತರರಿದ್ದರು.
Published on

ಶಿವಮೊಗ್ಗ: ಪಾಲಕರ ಮಾರ್ಗದರ್ಶನ, ಇಚ್ಛಾಶಕ್ತಿ ಹಾಗೂ ಗುರುಗಳ ಪ್ರೋತ್ಸಾಹದಿಂದ ವಿಜ್ಞಾನ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಚಂದ್ರಯಾನ ಯಶಸ್ವಿ ಉಡಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಪುತ್ರಿ, ಇಸ್ರೋ ವಿಜ್ಞಾನಿ ಶಿವಾಣಿ ಹೇಳಿದರು.

ಮಕ್ಕಳ ವಿದ್ಯಾಸಂಸ್ಥೆ ಮತ್ತು ತರುಣೋದಯ ಸಂಸ್ಥೆಯಿಂದ ಸೋಮವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಸ್ರೋ ಸಂಸ್ಥೆಯಲ್ಲಿ 20 ಸಾವಿರ ಉದ್ಯೋಗಿಗಳಿದ್ದಾರೆ. ಚಂದ್ರಯಾನ ಯಶಸ್ಸಿನಲ್ಲಿ ಎಲ್ಲರ ಶ್ರಮ, ಸಹಭಾಗಿತ್ವ ಇದೆ ಎಂದು ಮಾಹಿತಿ ನೀಡಿದರು.
ಕುಟುಂಬದ ಪ್ರತಿಯೊಬ್ಬರೂ ನನ್ನ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಇದು ಉನ್ನತ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು. ಕರ್ತವ್ಯ ಕಾರಣದಿಂದಾಗಿ ನನ್ನ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಯೂತ್ ಹಾಸ್ಟೆಲ್ ಅಧ್ಯಕ್ಷ ವಾಗೇಶ್, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ಪ್ರಮುಖರಾದ ಸುರೇಶ್‌ಕುಮಾರ್, ಡಾ. ಕೌಸ್ತುಭಾ, ಡಾ. ಶೇಖರ್ ಗೌಳೇರ್, ದಿಲೀಪ್ ನಾಡಿಗ್, ನಾಗರಾಜ್, ಲಕ್ಷ್ಮೀ, ರವೀಂದ್ರ, ಜಿ.ವಿಜಯ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net