ತೀರ್ಥಹಳ್ಳಿಯಲ್ಲಿ ಹಲವು ಮನೆಗಳಿಗೆ ಹಾನಿ

tth rain
ಆಗುಂಬೆ ಹೋಬಳಿ ಕುಂದಾ ಗ್ರಾಮದಲ್ಲಿ ಹಾನಿಗೀಡಾಗಿರುವ ಹರೀಶ್ ಪೂಜಾರಿ ಅವರ ಮನೆ.
Published on

ತೀರ್ಥಹಳ್ಳಿ: ಗಾಳಿ ಸಹಿತ ಮಳೆಯಿಂದಾಗಿ ತಾಲೂಕಿನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ ಮಕ್ಕಳ ಹಿತದೃಷ್ಟಿಯಿಂದ ಬುಧವಾರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಹಾದಿಗಲ್ಲು ಗ್ರಾಮದ ರೇಣುಕಾ ಚಂದ್ರಶೇಖರ್ ಎಂಬುವರ ಮನೆ ಗೋಡೆ ಕುಸಿದಿದೆ. ಆಗುಂಬೆ ಹೋಬಳಿ ಹೊಸೂರು ಗ್ರಾಮದಲ್ಲಿ ಮರ ಬಿದ್ದು ಶಾಂತಮ್ಮ ಎಂಬುವರ ಮನೆ ಮಾಡು ಕುಸಿದಿದೆ. ಆಗುಂಬೆ ಹೋಬಳಿ ಕುಂದಾ ಗ್ರಾಮದ ಕೃಷ್ಣಮೂರ್ತಿ, ಹರೀಶ್ ಪೂಜಾರಿ ಅವರ ಮನೆಗೂ ಹಾನಿಗೀಡಾಗಿವೆ. ಮುಂಡವಳ್ಳಿ ಗ್ರಾಮದ ಹೊಸಳ್ಳಿಯಲ್ಲಿ ಮರ ಬಿದ್ದು ದೇವಮ್ಮ ನರಸಿಂಹ ಮನೆಯ ಛಾವಣಿ ನೆಲಕಚ್ಚಿದೆ. ಶಂಕರಪುರ ಗ್ರಾಮದ ಸುಬ್ರಹ್ಮಣ್ಯ ಎಂಬುವರ ಮನೆ ಮೇಲೆ ಅಡಕೆ ಮರ ಬಿದ್ದಿದೆ. ತಲ್ಲೂರಿನ ಸುರೇಶ್ ದಾಸಯ್ಯ ಎಂಬುವರ ಮನೆಯ ಗೋಡೆ ನೆಲಕಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net