'ವಿಜಯಾನಂದ' ಚಲನಚಿತ್ರ ಪ್ರೇರಣಾದಾಯಕ ಜೀವನಗಾಥೆ

091222 Manvi Aparna Theater Vijayananda Movie
ಮಾನ್ವಿಯ ಅಪರ್ಣ ಚಿತ್ರ ಮಂದಿರದಲ್ಲಿ ಶುಕ್ರವಾರ ವಿಜಯಾನಂದ ಚಲನಚಿತ್ರ ವಿಕ್ಷಣೆ ಮಾಡಿದ ಪ್ರೇಕ್ಷಕರು.
Published on

ಮಾನ್ವಿ: ಡಾ.ವಿಜಯಸಂಕೇಶ್ವರರ ಜೀವನ ಆಧಾರಿತ ವಿಜಯಾನಂದ ಚಲನಚಿತ್ರಕ್ಕೆ ಪಟ್ಟಣದ ಅಪರ್ಣ ಚಿತ್ರಮಂದಿರದಲ್ಲಿ ಶುಕ್ರವಾರ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.

ಬಹು ನಿರೀಕ್ಷಿತ ವಿಜಯಾನಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಒಬ್ಬ ವ್ಯಕ್ತಿ ಜೀವನದಲ್ಲಿ ಹೇಗೆ ಸಾಧನೆ ಮಾಡಬಹುದು ಎನ್ನುವ ಮಾಹಿತಿ ನಮ್ಮೆಲ್ಲರಿಗೆ ಮಾದರಿಯಾಗಿದೆ. ಚಿತ್ರದಲ್ಲಿ ಒಳ್ಳೆಯ ಸಂಭಾಷಣೆ ಇವೆ. ಸಂಗೀತ ಕೂಡ ಚೆನ್ನಾಗಿದೆ. ದೃಶ್ಯಗಳನ್ನು ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಪ್ರತಿಯೊಬ್ಬ ಯುವಕರು ನೋಡಲೇ ಬೇಕಾದ ಚಿತ್ರವಾಗಿದೆ. ಒಂದು ಲಾರಿಯಿಂದ ಜೀವನದ ಪಯಣ ಆರಂಭಿಸಿ ಎಂಥ ಅಡೆತಡೆಗಳು ಬಂದರೂ ಎದುರಿಸಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಡಾ.ವಿಜಯ ಸಂಕೇಶ್ವರರು ನಮಗೆಲ್ಲ ಪ್ರೇರಣೆಯಾಗಿದ್ದಾರೆ ಎಂದು ಚಿತ್ರ ವಿಕ್ಷಣೆ ಮಾಡಿದ ಡಾ.ಶರಣಬಸವ ಗವಿಗಟ್ಟು ಹೇಳಿದರು.

ವಿದ್ಯಾರ್ಥಿಗಳು ವಿಜಯಾನಂದ ಚಿತ್ರ ನೋಡಬೇಕು. ಈ ಮೂಲಕ ಜೀವನದಲ್ಲಿ ಪ್ರೇರಣೆ ಸಿಗಲಿದೆ. ಪಾಲಕರು, ಗುರು, ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಅರ್ಥವಾಗುತ್ತದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಸಾಧಕರಾಗುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. ಪ್ರೇಕ್ಷಕರಾದ ನರಸಪ್ಪ, ಹನುಮಂತ, ಬಾಗಯ್ಯ, ಯಲ್ಲಪ್ಪ, ಹುಸೇನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net