'ಮಂಜುಮ್ಮೆಲ್ ಬಾಯ್ಸ್' ಓಟಿಟಿ ರಿಲೀಸ್ ಡೇಟ್ ಫಿಕ್ಸ್..​ ಕನ್ನಡ ಸೇರಿ 5ಭಾಷೆಗಳಲ್ಲಿ ಸ್ಟ್ರೀಮಿಂಗ್

manjummel boys malayalam
Published on

ತಿರುವನಂತಪುರಂ: ಮಲಯಾಳಂ ಸೂಪರ್ ಹಿಟ್ ಚಲನಚಿತ್ರ 'ಮಂಜುಮೇಲ್ ಬಾಯ್ಸ್' ಓಟಿಟಿ ಸ್ಟ್ರೀಮಿಂಗ್ ಆಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಸುಮಾರು 20 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಯಾವುದೇ ಸ್ಟಾರ್ ನಟರಿಲ್ಲದ, ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು.

ಚಿದಂಬರಂ ನಿರ್ದೇಶನದ 'ಮಂಜುಮೇಲ್ ಬಾಯ್ಸ್' ಫೆಬ್ರವರಿ 22ಕ್ಕೆ ತೆರೆಕಂಡಿತ್ತು. ಬಾಲು ವರ್ಗೀಸ್, ಸೌಬಿನ್ ಶಾಹಿರ್, ಶ್ರೀನಾಥ್ ಬಾಸಿ ನಟಿಸಿದ್ದರು. ಈ ಚಿತ್ರವು ತೆಲುಗಿಗೆ ಡಬ್ ಆಗಿ ಗೆದ್ದಿತ್ತು. ಇದೀಗ 5 ಭಾಷೆಗಳಲ್ಲಿ ಚಿತ್ರವನ್ನು ಓಟಿಟಿ ತರುವ ಪ್ರಯತ್ನ ನಡೆಯುತ್ತಿದೆ. ಕನ್ನಡದಲ್ಲೂ ಡಬ್ ಆಗಿ ಕರ್ನಾಟಕದಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 50 ದಿನ ಪೂರೈಸಿ ಸಿನಿಮಾ ಮುನ್ನುಗ್ಗುತ್ತಿದೆ.

ಈಗಾಗಲೇ ಚಿತ್ರದ ಗ್ರಾಸ್ ಕಲೆಕ್ಷನ್ 236 ಕೋಟಿ ರೂ. ದಾಟಿದೆ ಎನ್ನಲಾಗುತ್ತಿದೆ. ಕೆಲವರು ತಮ್ಮದೇ ಭಾಷೆಯಲ್ಲಿ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ.

ಡಿಜಿಟಲ್ ರೈಟ್ಸ್ ಯಾರಿಗೆ:

ಡಿಸ್ನಿ ಹಾಟ್‌ಸ್ಟರ್ ಈ ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಮೇ 5ರಂದು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ 'ಮಂಜುಮೇಲ್ ಬಾಯ್ಸ್' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಸಿನಿಮಾ ವೀಕ್ಷಿಸಬಹುದು. ಜೊತೆಗೆ ಏಷ್ಯಾನೆಟ್ ಸಂಸ್ಥೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಖರೀದಿಸಿದೆ. ಶೀಘ್ರದಲ್ಲೇ ಸಿನಿಮಾ ಟಿವಿಗೂ ಬರಲಿದೆ. ಈ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಭಾರತದ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಮಂಜುಮೇಲ್ ಬಾಯ್ಸ್' ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net