

ಮಣಿಪುರ: ಸಂಘರ್ಷಪೀಡಿತ ಮಣಿಪುರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದ್ದು, ಆರು ಮಂದಿಯ ಶವ ಪತ್ತೆಯಾಗಿದೆ. ಸಚಿವರು, ಶಾಸಕರ ಮನೆಗೆ ಪ್ರತಿಭಟನಾಕಾರರು ದಾಳಿ ಮಾಡಿದ್ದು, ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಇಂಫಾಲ್‌ನ ವಿವಿಧ ಭಾಗಗಳಲ್ಲಿ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಹಾರಿಸಿದರು. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮನೆ ಮೇಲೆ ಪ್ರತಿಭಟನಾ ನಿರತರು ದಾಳಿ ನಡೆಸಿದ್ದು, ಇಂಫಾಲ್ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿ ಕರ್ಫ್ಯೂ ವಿಧಿಸಲಾಗಿದೆ.
ಮಣಿಪುರದಲ್ಲಿ ಎರಡು ಚರ್ಚ್ ಸೇರಿದಂತೆ ಹಲವೆಡೆ ಬೆಂಕಿ ಹಚ್ಚಲಾಗಿದೆ. ಮೂವರು ಸಚಿವರು ಮತ್ತು ಆರು ಶಾಸಕರ ಮನೆಗಳನ್ನು ಹಿಂಸಾತ್ಮಕ ಗುಂಪು ಧ್ವಂಸ ಮಾಡಿದೆ.