

> ಕಿರುವಾರ ಎಸ್.ಸುದರ್ಶನ್ ಕೋಲಾರ
ಮಾವಿನ ಮರಗಳ ತುಂಬ ಹೂವು ಬಿಟ್ಟಿದ್ದು, ಉತ್ತಮ ಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಹೂವು ರಕ್ಷಣೆಯೇ ದೊಡ್ಡ ಸವಾಲಾಗಿದೆ.
ಮಾವಿನ ಫಸಲು ಒಂದು ವರ್ಷ ಹೆಚ್ಚಿದ್ದರೆ ಇನ್ನೊಂದು ವರ್ಷ ಕಡಿಮೆ ಇರುತ್ತದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚು ಹೂವು ಬಿಟ್ಟಿದ್ದು, ಆರಂಭದಿಂದಲೂ ಮಾವು ಬೆಳೆಗಾರರು ಉತ್ತಮ ಸಲಿನ ನಿರೀೆಯಲ್ಲಿದ್ದರು. ಆದರೆ, ಬಲದಲಾದ ಪರಿಸ್ಥಿತಿಯಲ್ಲಿ ಬಿಸಿಲಿನ ತಾಪಕ್ಕೆ ಹೂವು ಉದುರುತ್ತಿದ್ದು ರೈತರನ್ನು ಕಂಗೆಡಿಸಿದೆ.
ೆಬ್ರವರಿ ಕೊನೇ ಹಾಗೂ ಮಾರ್ಚ್ ಮೊದಲ ವಾರದಿಂದಲೂ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನೇದಿನೆ ಹೆಚ್ಚಾಗುತ್ತಿರುವುದರಿಂದ ಹೂವು ರಕ್ಷಣೆಗೆ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಈಗಾಗಲೇ ಮೊದಲ ಹಂತ ಮುಗಿಸಿದ್ದು, ಕೆಲವರು 2ನೇ ಹಂತ ಪ್ರಾರಂಭಿಸಿದ್ದಾರೆ. ಕೆಲವೆಡೆ ಸಣ್ಣ ಕಾಯಿಗಳು (ಪಿಂದೆ) ಮೂಡಲಾರಂಭಿಸಿವೆ.
ಗೊಂದಲದಲ್ಲಿ ರೈತ
ಜಿಲ್ಲೆಯಲ್ಲಿ ಒಟ್ಟು 4,56,36 ಹೆಕ್ಟೇರ್ ಮಾವು ಪ್ರದೇಶವಿದ್ದು, ಬೆಳೆ ಸಮೀೆಯ ವರದಿಯಂತೆ ಪ್ರಸಕ್ತ ಸಾಲಿನಲ್ಲಿ 3,95,310.32 ಟನ್ಗೂ ಹೆಚ್ಚು ಉತ್ಪಾದನೆಯ ಗುರಿಯಿದೆ. ಬೇನಿಶಾ, ಬಾದಾಮಿ (ಅಲ್ಫಾನ್ಸೊ), ತೋತಪುರಿ, ರಸಪುರಿ, ದಶೇರಿ, ನೀಲಂ, ರಾಜಗಿರ, ಮಲ್ಲಿಕಾ, ಮಲಗೋವಾ ವಿವಿಧ ತಳಿಯ ಮಾವಿಗೆ ಜಿಲ್ಲೆ ಪ್ರಸಿದ್ದವಾಗಿದೆ.
ಆದರೆ, ಹವಾಮಾನದ ವೈಪರೀತ್ಯದಿಂದಾಗಿ ಮಾವು ಚಿಗರು ಸಮೇತ ಹೂವು ಬಿಡುತ್ತಿದೆ. ಇದರಿಂದಾಗಿ ಜಿಗಿ ಹುಳ, ಹೂವು ಉದುರುವುದು ಸೇರಿ ಹಲವು ರೋಗಗಳು ಹರಡುತ್ತಿವೆ. ಇದನ್ನು ಹೇಗೆ ಹತೋಟಿಗೆ ತರಬೇಕು?, ಯಾವ ಯಾವ ಔಷಧ ಸಿಂಪಡಿಸಬೇಕು? ಗಿಡಗಳ ನಿರ್ವಹಣೆ ಹೇಗಿರಬೇಕು? ಎಂಬ ಗೊಂದಲ ಮೂಡಿಸಿದೆ.
ಪರಾಗಸ್ಪರ್ಶ ಇಲ್ಲದೆ ಕಾಯಿ ಕಟ್ಟಲ್ಲ
ಕಳೆದ ವರ್ಷ ಹೂವೇ ಬಿಡದ ಮರಗಳೂ ಈ ಬಾರಿ ಚಿಗುರೊಡೆದು, ಹೂವು ಬಿಟ್ಟಿವೆ. ಶೇ.90ಕ್ಕೂ ಹೆಚ್ಚು ಮರಗಳಲ್ಲಿ ಹೂವು ತುಂಬಿರುವುದರಿಂದ ಸಹಜವಾಗಿಯೇ ಉತ್ತಮ ಸಲು ನಿರೀಸಲಾಗಿತ್ತು. ಹೂವು ಬಿಟ್ಟಿರುವ ಪೈಕಿ ಶೇ.60-70 ಆದರೂ ಕಾಯಿ ಕಟ್ಟಿಕೊಂಡು ಮಳೆ ಬಂದರೂ ಫಸಲು ನಿಲ್ಲುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹೂವು ರಕ್ಷಣೆಗೆ ಪೂರಕವಾಗಿ ಔಷಧ ಸಿಂಪಡಿಸುತ್ತಿರುವುದರಿಂದ ಪರಾಗ ಸ್ಪರ್ಶಕ್ಕೆ ಸಹಕರಿಸುವ ಕೀಟಗಳು ಸಾಯುತ್ತವೆ. ಪರಾಗಸ್ಪರ್ಶ ಪರಿಣಾಮಕಾರಿಯಾಗಿ ನಡೆಯದಿದ್ದರೆ ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಕಟ್ಟುವುದಿಲ್ಲ. ಔಷಧ ಸಿಂಪಡಿಸದಿದ್ದರೆ ಹೂವು ಉದುರುವ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ.
* ಪೋಷಕಾಂಶ ಪೂರೈಕೆ ಅಗತ್ಯ
ಮಾವಿನ ಹೂವಿಗೆ ಜಿಗಿ ಹುಳುವಿನ ಕಾಟ ಕಂಡುಬಂದರೆ, ಇದು ಹೂವು ಗೊಂಚಲಿನ ರಸ ಹೀರುತ್ತದೆ. ಪರಿಣಾಮ ಹೂವು ಒಣಗಿ ಉದುರುತ್ತದೆ. ಅಲ್ಲದೇ ಹೂವು ಗೊಂಚಲಿನಲ್ಲಿ ಬೂಸ್ಟ್ ಕಾಣಿಸಿಕೊಳ್ಳುತ್ತದೆ. ಜಿಗಿ ಹುಳು ನಿಯಂತ್ರಣಕ್ಕೆ 4 ಗ್ರಾಂ ಕಾರ್ಬಾರಿಲ್ ಅಥವಾ 2 ಮಿ.ಲೀ ಮೆಲಾಥಿಯಾನ್ 50 ಇಸಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಮಾವು ಬೆಳೆಯಲ್ಲಿ ಬೋರಾನ್ ಹಾಗೂ ಸತುವಿನ ಕೊರತೆ ಮುಖ್ಯವಾಗಿ ಕಂಡು ಬರುತ್ತದೆ. ಇತರ ಲಘು ಪೋಷಕಾಂಶಗಳಾದ ಮ್ಯಾಂಗನೀಸ್ ಕಬ್ಬಿಣ ತಾಮ್ರಗಳ ಕೊರತೆಯೂ ಅನೇಕ ಪ್ರದೇಶಗಳಲ್ಲಿ ಕಂಡು ಬಂದಿದೆ. ಅವುಗಳ ಕೊರತೆಯಿಂದ ಮಾವಿನ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ಮಾವು ಸ್ಪೆಷನ್ ಎಂಬ ಸೂಕ್ಷ$್ಮ ಪೋಷಕಾಂಶಗಳ ಮಿಶ್ರಣವನ್ನು ಮಾವು ಬೆಳೆಯುವ ವಿವಿಧ ಪ್ರದೇಶಗಳ ಮಣ್ಣು ಹಾಗೂ ಮಾವಿನ ಎಲೆಗಳನ್ನು ವಿಶ್ಲೇಷಣೆ ಮಾಡಿ, ಮಣ್ಣಿಗೆ ಬೇಕಾಗುವ ಮುಖ್ಯ ಪೋಷಕಾಂಶಗಳಾದ ಸಾರಜನಕ ರಂಜಕ ಹಾಗೂ ಪೊಟ್ಯಾಷ್ಗಳ ಮಿಶ್ರಣ ದ್ರಾವಣವನ್ನು ಮಾವಿನ ಎಲೆಗಳ ಮೇಲೆ ಸಿಂಪಡಿಸುವುದರಿಂದ ಮರದ ಸುಪ್ತ ಹಸಿವನ್ನು ನೀಗಿಸಿದರೆ ಗುಣಮಟ್ಟದ ಹಾಗೂ ಅಧಿಕ ಇಳುವರಿ ಪಡೆಯಬಹುದು ಎನ್ನುತ್ತಾರೆ ತೋಟಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿಗಳು.
ಕೋಟ್...
ಕಾಯಿ ಕಚ್ಚಿರುವ ಕಡೆ 15 ದಿನಗಳಿಗೊಮ್ಮೆ ಮಾವಿನ ಮರಗಳಿಗೆ ನೀರು ಹಾಯಿಸುವುದರಿಂದ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಹೂವು ಹಂತದಲ್ಲಿ ಇರುವ ಮರಗಳು ತಜ್ಞರು ಶಿಾರಸ್ಸು ಮಾಡಿರುವ ಔಷಧ ಸಿಂಪಡಿಸಿ ಬೆಳೆ ರಸಿಕೊಳ್ಳಬಹುದು.
* ಕುಮಾರಸ್ವಾಮಿ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ಕೋಲಾರ
ಕೋಟ್...
ಬೇಸಿಗೆ ಆರಂಭಕ್ಕೂ ಮುನ್ನ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮರಗಳಲ್ಲಿ ಬಿಟ್ಟಿರುವ ಹೂವು ಕಾಯಿ ಕಟ್ಟುವ ಸಂದರ್ಭದಲ್ಲಿ ಉದುರುತ್ತಿದೆ. ಹೂವು ರಕ್ಷಣೆಗೆ ಇಲಾಖಾಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಅಗತ್ಯ ತರಬೇತಿ ನೀಡುವುದು ಉತ್ತಮ.
* ಚಂದ್ರಶೇಖರ್, ರೈತ, ಕಿರುವಾರ