

ಮಂಗಳೂರು: ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕಟೀಲು ಮೇಳದ ಕಲಾವಿದ ಮೃತಪಟ್ಟ ಘಟನೆ ಮಂಗಳೂರು ತಾಲೂಕಿನ ಕಟೀಲಿನಲ್ಲಿ ನಡೆದಿದೆ.
ಕಟೀಲು ನಾಲ್ಕನೇ ಮೇಳದ ಕಲಾವಿದ ಗುರುವಪ್ಪ ಬಾಯಾರು ( 58) ಮೃತ ಕಲಾವಿದ. ಕಟೀಲಿನ ಸರಸ್ವತೀ ಸದನದಲ್ಲಿ ತ್ರಿಜನ್ಮ ಮೋಕ್ಷ ಯಕ್ಷಗಾನ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಶಿಶುಪಾಲನ ಪಾತ್ರದಾರಿ ಗುರುವಪ್ಪ ಬಾಯರು ರಂಗಸ್ಥಳದಲ್ಲೇ ಇದ್ದರು.
ವೇದಿಕೆ ಮೇಲೆಯೇ ಹೃದಯಾಘಾತವಾಗಿ ಕುಸಿದು ಬಿದ್ದ ಬಾಯಾರು ಅವರನ್ನು ಕೂಡಲೇ ಅಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಬಯಾರು ಅವರ ಅಕಾಲಿಕ ಮರಣ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. (ದಿಗ್ವಿಜಯ ನ್ಯೂಸ್)