ಉದ್ದಿಮೆ ಪರವಾನಗಿ ಮಾಡದ ಮಳಿಗೆಗಳಿಗೆ ಮೇಯರ್ ನೇತೃತ್ವದಲ್ಲಿ ದಾಳಿ

mng--6 Feb meyar Ride
Published on

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟ್ರೇಡ್‌ಲೈನ್ಸನ್ ನವೀಕರಣ ಮಾಡದ ವ್ಯಾಪಾರ ಮಳಿಗೆಗಳಿಗೆ ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ಗುರುವಾರ ದಿಢೀರ್ ಕಾರ್ಯಾಚರಣೆ ನಡೆಸಲಾಯಿತು.

ನಗರದ ಫಿಝಾ ಬೈ ನೆಕ್ಸಸ್ ಮಾಲ್ ಹಾಗೂ ಟೋಕಿಯೋ ಮಾರ್ಕೇಟ್‌ಗಳಿಗೆ ಮೇಯರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೆಲವೊಂದು ಅಂಗಡಿಗಳು ಟ್ರೇಡ್‌ಲೈನ್ಸನ್ ನವೀಕರಿಸದ ಹಿನ್ನಲೆಯಲ್ಲಿ ಬೀಗ ಜಡಿಯಲಾಯ್ತು. ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ ಮಾಲೀಕರಿಗೆ ಮೇಯರ್ ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ಮೇಯರ್, ಹಲವಾರು ಮಂದಿಯ ದೂರಿನ ಮೇರಿಗೆ ದಾಳಿ ಮಾಡಲಾಗಿದೆ. ಕೆಲವೊಂದು ಅಂಗಡಿಗಳಲ್ಲಿ ಟ್ರೇಡ್ ಲೈನ್ಸನ್ ನವೀಕರಣ ಮಾಡದ ಹಿನ್ನಲೆಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಲಾಗುವುದು ಎಂದರು.

ಉಪಮೇಯರ್ ಭಾನುಮತಿ, ಪಾಲಿಕೆ ಸದಸ್ಯೆ ಸುಮಿತ್ರಾ ಕರಿಯ, ಕಂದಾಯ ಅಧಿಕಾರಿ ವಿಜಯ್ ಮೊದಲಾದವರು ಉಪಸ್ಥತಿರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net