ಕಡಲ ತೀರಕ್ಕೆ ಬಾರದ ಹಕ್ಕಿಗಳ ವೀಕ್ಷಣೆ!

bired
Published on

ಮಂಗಳೂರು: ಪಕ್ಷಿ ವೀಕ್ಷಕರಿಗೆ ಕಡಲ ಹಕ್ಕಿಗಳ ಬಗೆಗೆ ಸದಾ ಕುತೂಹಲ. ಮೀನುಗಳನ್ನು ತಿನ್ನುತ್ತಾ ಕಡಲಿನಲ್ಲೇ ವಾಸಿಸುವ ಈ ಹಕ್ಕಿಗಳು ಕಡಲತೀರಕ್ಕೆ ಬರುವುದು ಕಡಿಮೆ. ಅವುಗಳ ವೀಕ್ಷಣೆಗೆ ಸಮುದ್ರದಲ್ಲೇ ಸಾಗಬೇಕು. ಕಡಲಿನ ಮೀನುಗಳನ್ನು ಬೇಟೆಯಾಡುವಾಗ ಅವುಗಳನ್ನು ನೋಡಬಹುದು ಎಂದು ಕೋಸ್ಟಲ್ ಬರ್ಡ್ ವಾಚರ್ಸ್ ನೆಟ್​ವರ್ಕ್ ಸದಸ್ಯ ಎಂ. ಶಿವಶಂಕರ್ ತಿಳಿಸಿದ್ದಾರೆ.

ಸ್ಕುವಾ ಪ್ರಭೇದಕ್ಕೆ ಸೇರಿದ ಆರ್ಟಿಕ್ ಸ್ಕುವಾ, ಪಮೋರಿಯನ್ ಸ್ಕುವಾ, ಲಾಂಗ್​ಟೇಲ್ಡ್ ಸ್ಕುವಾ, ಸ್ಟಾಮ್ರ್ ಪ್ಯಾಟ್ರೆಲ್, ಶೀಯರ್ ವಾಟರ್ ಬರ್ಡ್, ಮಾಸ್ಕ್​ಡ್ ಬೂಬಿ, ಫ್ರಿಗೇಟ್ ಬರ್ಡ್ ಇತ್ಯಾದಿ ಸಮುದ್ರ ಹಕ್ಕಿಗಳನ್ನು 10 ವರ್ಷಗಳ ಅಭಿಯಾನದಲ್ಲಿ ಮಂಗಳೂರು ಆಸುಪಾಸಿನ ಸಮುದ್ರದಲ್ಲಿ ಪತ್ತೆ ಮಾಡಲಾಗಿದೆ. ಈ ಬಾರಿ ಸ್ಕುವಾ ಪ್ರಭೇದದ ಹಕ್ಕಿಗಳು ಅಲ್ಲದೆ ಡಾಲ್ಪಿನ್, ಸೀ ಗಲ್ಸ್​ಗಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net