ನಾನು ರಾಜಕೀಯ ಬಿಟ್ರೂ ಮಂಡ್ಯ ಬಿಡಲ್ಲ: ಸುಮಲತಾ ಅಂಬರೀಶ್​

sumalatha
Published on

ಮಂಡ್ಯ: ನಾನು ಮಂಡ್ಯ ಬಿಡ್ತೇನೆ ಅಂತ ಒಂದಷ್ಟು ಜನ ಕನಸು ಕಾಣ್ತಿದ್ದಾರೆ. ಆದರೆ ನಾನು ರಾಜಕೀಯ ಬಿಟ್ರೂ ಮಂಡ್ಯ ಬಿಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮದ್ದೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಸುಮಲತಾ, ಮಂಡ್ಯ ಜನರ ಆಸೆಯಂತೆ ನಾನು ಮಂಡ್ಯಕ್ಕೆ ಬಂದಿದ್ದೇನೆ. ನಾನು ಮಂಡ್ಯ ಬಿಟ್ಟು ಮತ್ತೊಂದು ಕಡೆ ಯಾಕೆ ಹೋಗಬೇಕು? ಕ್ಷೇತ್ರ ಹುಡುಕುತ್ತಿದ್ದೇನೆ ಅನ್ನೋದು ಯಾರ ಕನಸು ಅಂತ ಗೊತ್ತಿಲ್ಲ. ಮಂಡ್ಯ ಬಿಡ್ತೇನೆ ಅಂತ ಪಾಪಾ ಒಂದಷ್ಟು ಜನ ಕನಸು ಕಾಣ್ತಿದ್ದಾರೆ. ಅವರ ಕನಸಿಗೆ ನಾನು ನೀರು ಚೆಲ್ಲಿದ ಹಾಗೆ ಎಂದರು.

ರಾಜಕೀಯಕ್ಕೆ ನಾನು ಬಂದೀರೋದೆ ಮಂಡ್ಯಕ್ಕೋಸ್ಕರ. ರಾಜಕೀಯದಲ್ಲಿ ಏನೇನೋ ಹಾಗ್ಬೇಕು ಅಂತ ಮಂಡ್ಯಕ್ಕೆ ಬಂದಿಲ್ಲ. ಮಂಡ್ಯ ಬಿಟ್ಟು ಹೋಗಲ್ಲ ಎಂದು ಎದುರಾಳಿಗಳಿಗೆ ಸುಮಲತಾ ತಿರುಗೇಟು ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net