ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ವಹಣಾ ಶುಲ್ಕ ಕಡ್ಡಾಯ : ಹೈಕೋರ್ಟ್ ಆದೇಶ

highcourt
Published on

ಬೆಂಗಳೂರು: ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ನಿರ್ವಹಣಾ ಶುಲ್ಕವನ್ನು ಪಾವತಿಸಲೇಬೇಕು. ಇದು ವಾಣಿಜ್ಯ ವಹಿವಾಟಲ್ಲ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣ ಸಂಬಂಧ ಮಂಗಳೂರಿನ ಶಾಂಗ್ರಿಲಾ ಫ್ಲ್ಯಾಟ್ ಓನರ್ಸ್ ಅಸೋಸಿಯೇಷನ್‌ನ ಗ್ರೆಗೋರಿ ಫ್ಪೆರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ಜಿ. ಕಮಲ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ನಿರ್ವಹಣಾ ಶುಲ್ಕ ಪಾವತಿಯು ನಿವಾಸಿಗಳ ಸಾಮೂಹಿಕ ಹೊಣೆಗಾರಿಕೆ. ಹೀಗಾಗಿ ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೆಮಾಭಿವೃದ್ಧಿ ಸಂಘಗಳ ಸದಸ್ಯರು ನಿರ್ವಹಣಾ ಶುಲ್ಕ ಪಾವತಿಯಿಂದ ತಪ್ಪಿಸಿಕೊಳ್ಳಲಾಗದು. ನಿರ್ವಹಣಾ ಶುಲ್ಕ ನೀಡದಿರುವುದು ಸಮರ್ಥನೀಯವಲ್ಲ. ಇತರ ನಿವಾಸಿಗಳ ಹಿತರಕ್ಷಣೆಗೆ ತೊಂದರೆ ಆಗುವುದರಿಂದ ನಿರ್ವಹಣಾ ಶುಲ್ಕ ಪಾವತಿಸಲೇಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಜತೆಗೆ 70 ವರ್ಷದ ಕ್ಯಾಪ್ಟನ್ ಮೋಹನ್ ಪ್ರಭು ಮಂಗಳೂರಿನ ಶಾಂಗ್ರಿಲಾ ಆಫ್ ಓನರ್ಸ್ ಅಸೋಸಿಯೇಷನ್‌ಗೆ ಬಾಕಿ ಉಳಿಸಿಕೊಂಡಿರುವ 6,58,695 ರೂ. ನಿರ್ವಹಣಾ ಶುಲ್ಕವನ್ನು ಶೇ.10 ಬಡ್ಡಿ ಸಹಿತ ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ನಿರ್ವಹಣಾ ಶುಲ್ಕ ಪಾವತಿಸದೆ ಡಿಾಲ್ಟರ್ ಆಗಿರುವ ಮೋಹನ್ ಪ್ರಭು ವಿರುದ್ಧ ಬಾಕಿ ಹಣ ವಸೂಲಿಗೆ ಅಧೀನ ನ್ಯಾಯಾಲಯ ನೀಡಿದ್ದ ಡಿಕ್ರಿ ಆದೇಶವನ್ನು ಎತ್ತಿಹಿಡಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net