ಶ್ರೀ ಕರಿಬಸವೇಶ್ವರಸ್ವಾಮಿ ದೇಗುಲದಲ್ಲಿ ಮಂಡಲ ಪೂಜೆ

24tnpnewsfile01 (1)
Published on
  • ಮೈಸೂರು : ತಾಲೂಕಿನ ಹಳೇ ತಲಕಾಡಿನಲ್ಲಿರುವ ಶ್ರೀ ಕರಿಬಸವೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಜೀರ್ಣೋದ್ಧಾರ ಕಾರ್ಯಕ್ರಮದ 48ನೇ ದಿನದ ಮಂಡಲ ಪೂಜೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.

  • ಪೂಜೆ ನಿಮಿತ್ತ ದೇವಾಲಯವನ್ನು ತಳಿರು-ತೋರಣ, ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಹೋಮ, ಹವನ, ದೇವರಿಗೆ ವಿವಿಧ ಅಭಿಷೇಕ, ವಿಶೇಷ ಅಲಂಕಾರ, ಪೂಜೆ ನೆರವೇರಿತು.

  • ಪುರೋಹಿತರಾದ ಮೈಸೂರಿನ ನಾಗೇಶ್ ಅವರು ಪೂಜಾ ಕೈಂಕರ್ಯ ನಡೆಸಿಕೊಟ್ಟರು. ತಲಕಾಡು, ಶಂಭುದೇವನಪುರ, ದೊಡ್ಡನಹುಂಡಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ದೇವಾಲಯ ಜೀರ್ಣೋದ್ಧಾರ ಸಮಿತಿ ವತಿಯಿಂದ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತಲ್ಲದೆ, ಮಧ್ಯಾಹ್ನ ಅನ್ನ ದಾಸೋಹ ಏರ್ಪಡಿಸಲಾಗಿತ್ತು.

  • ಇದೇ ಸಂದರ್ಭದಲ್ಲಿ ಹಸ್ತಿಕೇರಿ ಮಠದ ಶ್ರೀ ಸಿದ್ದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಚ್.ಬಿ.ಮರಿಯಪ್ಪ, ಗೌರವಾಧ್ಯಕ್ಷ ಚನ್ನಬಸವಣ್ಣ, ಕಾರ್ಯದರ್ಶಿ ಎಸ್.ಬಿ.ಸುಗಂಧರಾಜು, ಸದಸ್ಯರಾದ ದೊಡ್ಡನಹುಂಡಿ ನಂಜುಂಡಪ್ಪ, ಬಾಯನಹಳ್ಳಿ ರಾಜೇಂದ್ರ, ಡಣಾಯಕನಪುರ ನಂಜುಂಡಸ್ವಾಮಿ, ಶಂಭುದೇವನಪುರದ ಗೌಡರ ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net