ಪಟಾಕಿಯ ಆಭರಣ ಧರಿಸಿ ಕೈಯಲ್ಲಿ ದೀಪವನ್ನು ಹಿಡಿದು ಡ್ಯಾನ್ಸ್ ಮಾಡಿದ! Deepavali Firecrackers

viral video
Published on

Deepavali Firecrackers : ಉರ್ಫಿ ಜಾವೇದ್ ಚಿತ್ರವಾದ ಬಟ್ಟೆಗಳನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.  ಉರ್ಫಿ ಜಾವೇದ್ ಅವರ ಅಸಾಧಾರಣ ಫ್ಯಾಷನ್ ಸೆನ್ಸ್‌ಗೆ ಸ್ಪರ್ಧಿಸಲು ಮಾರುಕಟ್ಟೆಯಲ್ಲಿ ಹೊಸ ಹುಡುಗನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಈತನ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿರುವ ಯುವಕ ಉರ್ಫಿಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಇದರಲ್ಲಿ ಯುವಕ ದೀಪಾವಳಿಯ ದಿನ ಸಿಡಿಸುವ ಪಟಾಕಿಯಿಂದ ಆಭರಣಗಳನ್ನು ಮಾಡಿ ಧರಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್ ವೀಡಿಯೊದಲ್ಲಿ, ಯುವಕನೊಬ್ಬ ಹೊಳೆಯುವ ಲೆಹೆಂಗಾ-ಚೋಲಿಯನ್ನು ಧರಿಸಿದ್ದಾನೆ. ಪಟಾಕಿಯ ಮಾಲೆ, ಮಣಿಗಳಿಂದ ಮಾಡಿದ ಕಿವಿಯೋಲೆ, ಬಾಂಬುಗಳ ಹಾರ ಮುಂತಾದ ಆಭರಣಗಳನ್ನು ಮಾಡಿ ಧರಿಸಿದ್ದಾನೆ. ಯುವಕ ತನ್ನ ಕೈಯಲ್ಲಿ ಬೆಳಗಿದ ದೀಪವನ್ನು ಸಹ ಹಿಡಿದು ಡಾನ್ಸ್​​ ಮಾಡಿದ್ದಾನೆ.

ಇಂತಹ ಡ್ರೆಸ್ ತೊಟ್ಟರೆ ಅನಾಹುತ ಆಗೋದು ಪಕ್ಕಾ...ಸ್ವಲ್ಪ ಎಚ್ಚರ ತಪ್ಪಿದರೂ ಗಂಭೀರ ಅಪಾಯಕ್ಕೆ ಸಿಲುಕುವ ಸಂಭವವಿದೆ. ಪಟಾಕಿಯ ಬಳಿ ಉರಿಯುವ ದೀಪವನ್ನು ಒಯ್ಯುವುದು ಅಪಾಯಕಾರಿ ನಿರ್ಧಾರ ಎಂದು ಕಾಮೆಂಟ್​​  ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವಕನನ್ನು ಕಂಟೆಂಟ್ ಕ್ರಿಯೇಟರ್ ರವಿಸಾಗರ್ ಎಂದು ಗುರುತಿಸಲಾಗಿದೆ. ಏಳು ದಿನಗಳ ಹಿಂದೆ @ravisagar88 ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ಇದುವರೆಗೆ 35 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ತಮಾಷೆಯ ಕಾಮೆಂಟ್‌ಗಳೊಂದಿಗೆ ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net