

ನಾಸಿಕ್: ವಿಶ್ವದಾದ್ಯಂತ ಕರೊನಾ ವೈರಸ್ ಸೋಂಕಿ ಭೀತಿ ಆವರಿಸಿರುವಂತೆ, 500 ರೂ. ನೋಟುಗಳ ಕಂತೆ ಬಳಸಿ ಮೂಗು, ಬಾಯಿ ಒರೆಸಿಕೊಂಡು, ಹೇಸಿಗೆ ಮೂಡಿಸಿದ್ದ ವ್ಯಕ್ತಿಯನ್ನು ನಾಸಿಕ್ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈತನಿಗೆ ಕರೋನಾ ವೈರಸ್ ಸೋಂಕು ಇತ್ತೇ, ಇಲ್ಲವೇ ಎಂಬುದನ್ನೂ ಅವರು ತಿಳಿಸಿಲ್ಲ. ಆದರೆ, ಆತ ತಮ್ಮ ಕಸ್ಟಡಿಯಲ್ಲಿರುವುದಾಗಿ ನಾಸಿಕ್ ಗ್ರಾಮಾಂತರ ಠಾಣೆ ಪೊಲೀಸರು ಟ್ವೀಟ್ ಮಾಡಿದ್ದಾರೆ.
500 ರೂ. ನೊಟುಗಳ ಕಂತೆಯಲ್ಲಿ ತನ್ನ ಮೂಗು, ಬಾಯಿಯನ್ನು ಒರೆಯಿಸಿಕೊಂಡಿದ್ದ ಈತ, ಇದು ನಿಮಗೆ ಅಲ್ಲಾಹುವಿನ ಶಿಕ್ಷೆ ಎಂದು ಹೇಳುತ್ತಿರುವ ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ. ಇದು ಭಾರಿ ವೈರಲ್ ಆಗಿತ್ತು.