ಕರೊನಾ ವಾರಿಯರ್ಸ್​ಗೆ ಊಟ ಕೊಟ್ಟವ ಅಪಘಾತದಲ್ಲಿ ಸಾವು

state 1
Published on

ಮಳವಳ್ಳಿ: ಲಾಕ್​ಡೌನ್ ಜಾರಿಯಾದಾಗ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳಿ, ತನ್ನೂರಿನ ಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕರೊನಾ ಸೇನಾನಿಗಳಿಗೆ 3 ತಿಂಗಳ ಕಾಲ ಉಚಿತವಾಗಿ ಊಟ, ತಿಂಡಿ ನೀಡಿ ಮನಗೆದ್ದಿದ್ದ ತಿ.ನರಸೀಪುರ ತಾಲೂಕು ಮಲಿಯೂರು ಗ್ರಾಮದ ಮಹೇಶ್ (23) ಶುಕ್ರವಾರ ರಾತ್ರಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇತನ ಜತೆಗಿದ್ದ ಸ್ನೇಹಿತ ಮಾದೇಶ್ (28) ಕೂಡ ಅಸುನೀಗಿದ್ದಾನೆ.

ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ಶುಕ್ರವಾರ ರಾತ್ರಿ ಬೈಕ್​ನಲ್ಲಿ ಬರುತ್ತಿದ್ದರು. ಈ ವೇಳೆ ಮದ್ದೂರು-ಮಳವಳ್ಳಿ ಹೆದ್ದಾರಿಯ ಬುಗತಹಳ್ಳಿ ಗೇಟ್ ಬಳಿ ವಾಹನವೊಂದು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಯಾರ ನೆರವೂ ಸಿಕ್ಕಿಲ್ಲ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸೇನಾನಿಗಳು ಕಂಬನಿ: ಬನ್ನೂರು ಮತ್ತು ಕಿರುಗಾವಲು ಚೆಕ್​ಪೋಸ್ಟ್ ಗಳಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಹೋಂಗಾರ್ಡ್​ಗಳಿಗೆ ಮಹೇಶ್ ನಿತ್ಯ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡುತ್ತಿದ್ದರು. ಈತನಿಂದ ಆಹಾರ ಪಡೆಯುತ್ತಿದ್ದವರು ಸಾವಿನ ಸುದ್ದಿ ಕೇಳಿ ಕಣ್ಣೀರು ಹಾಕಿದ್ದಾರೆ. ಮಹೇಶ್ ಅಗಲಿಕೆ ಕುಟುಂಬ ಸದಸ್ಯರಿಗೆ ಮಾತ್ರವಲದ್ಲೆ, ಕರೊನಾ ಸೇನಾನಿಗಳಿಗೂ ದುಃಖ ತರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net