

ಕರೊನಾ ವೈರಸ್ ದಾಂಗುಡಿ ಇಟ್ಟ ಮೇಲೆ ತರಕಾರಿ..ಹಣ್ಣುಗಳನ್ನೆಲ್ಲ ತೊಳೆದಷ್ಟೂ ಸಾಲುತ್ತಿಲ್ಲ. ಅದರ ಶುಚಿತ್ವ ಹೇಗೆ ಮಾಡುವುದು ಎಂಬುದೇ ದೊಡ್ಡ ತಲೆನೋವಾಗಿದೆ.
ಮಾರ್ಕೆಟ್ನಿಂದ ತಂದ ಹಣ್ಣು, ತರಕಾರಿಗಳನ್ನು ಸ್ವಲ್ಪ ಹೊತ್ತು ಉಪ್ಪು, ಅರಿಶಿಣ ಹಾಕಿದ ನೀರಿನಲ್ಲಿ ನೆನೆಸಿಟ್ಟು, ನಂತರ ಅದನ್ನು ತೊಳೆದು, ಒರೆಸಿ ಇಡುತ್ತಿದ್ದಾರೆ. ಆದರೆ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು , ವ್ಯಕ್ತಿಯೋರ್ವ ತರಕಾರಿ ಶುದ್ಧೀಕರಣ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಈ ವ್ಯಕ್ತಿ ಗ್ಯಾಸ್ ಮೇಲೆ ಪ್ರೆಶರ್ ಕುಕ್ಕರ್ ಇಟ್ಟಿದ್ದಾನೆ. ಆದರೆ ಅದರ ಮುಚ್ಚಳದ ಮೇಲೆ ವಿಶಲ್ ಅಳವಡಿಸುವ ಬದಲು ಒಂದು ಪೈಪ್ (ಗ್ಯಾಸ್ ಪೈಪ್ನಂಥದ್ದು) ಹಾಕಿದ್ದಾರೆ. ಆ ಪೈಪ್ನ ಇನ್ನೊಂದು ತುದಿಯಲ್ಲಿ ಫುಲ್ ಹಬೆ ಹೋಗುತ್ತಿರುತ್ತದೆ. ಹಾಗೇ, ವಿವಿಧ ತರಕಾರಿಗಳನ್ನು ಅಲ್ಲಿಯೇ ಕಟ್ಟೆಯ ಮೇಲಿಟ್ಟುಕೊಂಡು, ಪೈಪ್ನ್ನು ಅವುಗಳತ್ತ ಹಿಡಿಯುತ್ತಿದ್ದಾನೆ. ಹಾಗೇ, ಕೈಯಲ್ಲಿ ತರಕಾರಿಗಳನ್ನು ತಿರುವುತ್ತ, ಅವಕ್ಕೆ ಸ್ಟೀಮ್ ಕೊಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಕಾಲುಜಾರಿ ಸತ್ತಳೆಂದು ಕಥೆ ಕಟ್ಟಿದ ಅಪ್ಪ! ಪೋಸ್ಟ್‌ಮಾರ್ಟಮ್‌ನಿಂದ ರಹಸ್ಯ ಬಯಲು
ವಿಡಿಯೋ ಪೋಸ್ಟ್ ಮಾಡಿರುವ ಸುಪ್ರಿಯಾ ಸಾಹು, ಈ ವ್ಯಕ್ತಿ ತರಕಾರಿಗಳನ್ನು ಶುದ್ಧಿಕರಿಸುತ್ತಿರುವುದನ್ನು ನೋಡಿ. ಈ ವಿಧಾನ ಎಷ್ಟು ಪರಿಣಾಮಕಾರಿ ಎಂಬುದನ್ನು ನಾನು ಪ್ರಮಾಣೀಕರಿಸಲಾರೆ. ಆದರೆ ವಿಸ್ಮಯ ಹೌದು ಎಂದು ಕ್ಯಾಪ್ಷನ್ ಬರೆದಿದ್ದಾರೆ.
ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಆದರೆ ಅನೇಕರು ಇದು ತುಂಬ ಅಪಾಯಕಾರಿ ವಿಧಾನ. ಹೀಗೆ ಕುಕ್ಕರ್ಗೆ ಪೈಪ್ ಹಾಕಿ ತರಕಾರಿಗಳನ್ನು ಸ್ವಚ್ಛ ಮಾಡುವುದು ಸರಿಯಲ್ಲ. ಕುಕ್ಕರ್ನಲ್ಲಿ ನೀರೆಲ್ಲ ಆರಿ ಹೋಗಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಮೆಚ್ಚಿಕೊಂಡಿದ್ದಾರೆ.
ಹಾಗಾಗಿ ವಿಡಿಯೋ ನೋಡಿ ಖುಷಿಪಡಿ..ನೀವು ಟ್ರೈ ಮಾಡೋ ಮುನ್ನ ಯೋಚಿಸಿ...(ಏಜೆನ್ಸೀಸ್)