VIDEO| ಕುಳಿತಲ್ಲೇ ಈ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದಾದ್ದರೂ ಎಲ್ಲಿ; ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಏನು, ಇಲ್ಲಿದೆ ನೋಡಿ..!

URINE
Published on

ಈ ಮನುಷ್ಯ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್​ ಆಗಿದ್ದಾರೆ.

ಅಷ್ಟು ಮಂದಿ ನೆರೆದಿರುವ ಸ್ಥಳದಲ್ಲಿ ಕೂತಲ್ಲೇ ಮೂತ್ರವಿಸರ್ಜನೆ ಮಾಡಿ, ಅಲ್ಲಿ ನೆರೆದಿದ್ದ ಮಂದಿಗೆ ಮುಜುಗರ ಉಂಟು ಮಾಡಿದ್ದಾನೆ. ಅಂದಹಾಗೆ ಈ ಪುಣ್ಯಾತ್ಮ ಮೂತ್ರ ಮಾಡಿದ್ದು ವಿಮಾನ ನಿಲ್ದಾಣದ ಟರ್ಮಿನಲ್​ನಲ್ಲಿ.

ಇವನು ಸಾರ್ವಜನಿಕ ಸ್ಥಳದಲ್ಲೇ ಕುಳಿತು ಹೀಗೆ ಮಾಡುತ್ತಿರುವುದಕ್ಕೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಕೆಲವರಂತೂ ಇದಕ್ಕಿಂತ ವಿಲಕ್ಷಣ ಘಟನೆ ಇರಲಿಕ್ಕಿಲ್ಲ ಎಂದಿದ್ದಾರೆ.

ಪ್ಯಾಸೆಂಜರ್​ ಶೇಮಿಂಗ್​ ಎಂಬ ಇನ್​​ಸ್ಟಾಗ್ರಾಂ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಒಬ್ಬಾತ ವಿಮಾನ ನಿಲ್ದಾಣದ ಟರ್ಮಿನಲ್​ನಲ್ಲಿ ಕುಳಿತಿದ್ದಾನೆ. ಏನು ಗೊತ್ತಿಲ್ಲದವನಂತೆ ಕುಳಿತಿದ್ದ ಆತ ಪ್ಯಾಂಟ್​ನ ಝಿಪ್​ ಬಿಚ್ಚಿ ಎಲ್ಲರ ಎದುರೇ ಮೂತ್ರ ವಿಸರ್ಜಿಸುತ್ತಾನೆ.

ಸುತ್ತಲೂ ಇದ್ದ ಪ್ರಯಾಣಿಕರು ಈ ಘಟನೆಯಿಂದ ಶಾಕ್​ ಆಗುತ್ತಾರೆ. ಅವರ ಮುಖದಲ್ಲಿ ತಿರಸ್ಕಾರ ಭಾವ ಮೂಡುತ್ತದೆ.

ವಿಮಾನ ನಿಲ್ದಾಣದ ಪರಿಚಾರಕರು ಪ್ರಯಾಣಿಕರನ್ನು ರೆಸ್ಟ್​ ರೂಂ ಬಳಸಲು ಬಿಟ್ಟಿಲ್ಲ. ಭದ್ರತಾ ಸಿಬ್ಬಂದಿ ಕೂಡ ಇದಕ್ಕೆ ಕಾರಣರು. ಹಾಗಾಗಿ ವಿಮಾನ ಪ್ರಯಾಣ ಮತ್ತು ಪ್ರಯಾಣಿಕರ ಸ್ಥಿತಿ ಚಿಂತಾಜನಕ ಎಂದು ಕೆಲವರು ಈ ವಿಡಿಯೋಗೆ ಕಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net