VIDEO | ಎಂಥಾ ಟ್ಯಾಲೆಂಟ್ ಬ್ರೋ.. ಮೂಗಿನಿಂದ ಟೈಪ್ ಮಾಡಿ ದಾಖಲೆ ಬರೆದ..

viralvideo
Published on

ನವದೆಹಲಿ:  ಒಬ್ಬ ವ್ಯಕ್ತಿ ತನ್ನ ಕೈಗಳಿಗೆ ಬದಲಾಗಿ ತನ್ನ ಮೂಗಿನಿಂದ ಟೈಪ್ ಮಾಡುತ್ತಿದ್ದಾನೆ. ಅತಿವೇಗದಲ್ಲಿ ಟೈಪ್ ಮಾಡುತ್ತಾ ಗಿನ್ನಿಸ್ ದಾಖಲೆಯಲ್ಲೂ ಹೆಸರು ದಾಖಲಿಸಿದ್ದಾರೆ. ಇದು ಒಂದಲ್ಲ ಎರಡಲ್ಲ.. ಮೂರನೇ ಬಾರಿ ತಮ್ಮದೇ ದಾಖಲೆಯನ್ನು ಮುರಿದಿದ್ದಾನೆ.

ಈ ವ್ಯಕ್ತಿ ಈಗಾಗಲೇ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್​​​ನಲ್ಲಿ ಎರಡು ದಾಖಲೆಗಳನ್ನು ಹೊಂದಿದ್ದಾರೆ. ಇದೀಗ ಮತ್ತೊಮ್ಮೆ ಮೂರನೇ ಬಾರಿ ತಮ್ಮದೇ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದಾರೆ.

ಈ ವ್ಯಕ್ತಿಯ ಹೆಸರು ವಿನೋದ್ ಕುಮಾರ್ ಚೌಧರಿ. ಅವರ ವಯಸ್ಸು 44 ವರ್ಷ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, 44 ವರ್ಷದ ವಿನೋದ್ ಕುಮಾರ್ ಚೌಧರಿ ಇದೇ ವಿಭಾಗದಲ್ಲಿ ಮೂರು ಬಾರಿ ದಾಖಲೆಯನ್ನು ಹೊಂದಿದ್ದಾರೆ. ಅವರು 2023 ರಲ್ಲಿ 27.80 ಸೆಕೆಂಡುಗಳಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದರು. ಅದೇ ವರ್ಷದಲ್ಲಿ ಅವರು 26.73 ಸೆಕೆಂಡುಗಳಲ್ಲಿ ಟೈಪ್ ಮಾಡುವ ಮೂಲಕ ಎರಡನೇ ಬಾರಿಗೆ ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಗೆದ್ದರು. ಈ ವೇಳೆ ಚೌಧರಿ ಕೇವಲ 25.66 ಸೆಕೆಂಡುಗಳಲ್ಲಿ ಈ ಸಾಧನೆ ಮಾಡಿದರು.

ಈ ವಿಡಿಯೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ ಅವನು ತನ್ನ ಮೂಗಿನಿಂದ ಇಂಗ್ಲಿಷ್ ಅಕ್ಷರಗಳನ್ನು ಟೈಪ್ ಮಾಡುತ್ತಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ನಂತರ ಅನೇಕ ನೆಟಿಜನ್‌ಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net