

ಬೆಂಗಳೂರು: ತನ್ನ ಪತ್ನಿಯನ್ನು ಅಪಹರಿಸಿದ್ದಾರೆ. ಆಕೆಯನ್ನು ಹುಡುಕಿಕೊಡಿ ಎಂದು ಸಂತ್ರಸ್ತ ಪತಿರಾಯನೊಬ್ಬ ಟ್ವೀಟ್ ಮಾಡಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.
ಟ್ವೀಟ್ನಲ್ಲಿ ಅಪಹರಿಸಿದವನ ಫೋಟೋ ಕೂಡ ಪೋಸ್ಟ್ ಮಾಡಿದ್ದಾನೆ. ಆತನ ಹೆಸರು ಅವಿನಭಾ ಚಕ್ರವರ್ತಿ. ಈತ ಪತ್ನಿಯನ್ನು ಬಲವಂತವಾಗಿ ಅಪಹರಿಸಿದ್ದಾನೆ. ಆಕೆಯನ್ನು ರಕ್ಷಿಸಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾನೆ.
ಸಂತ್ರಸ್ತನ ಹೆಸರು ಕುಂಟಾಲ್ ಬ್ಯಾನರ್ಜಿ. ಈತ ಛತ್ತೀಸ್ಗಢದಿಂದ ಟ್ವೀಟ್ ಮಾಡಿದ್ದಾನೆ. ಆತನ ಪತ್ನಿ ಬೆಂಗಳೂರು ನಗರದಲ್ಲಿದ್ದು, ಆಕೆಯನ್ನು ರಕ್ಷಣೆ ಮಾಡುವಂತೆ ಬೆಂಗಳೂರು ಪೊಲೀಸರ ಅಧಿಕೃತ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಮಾಡಿದ್ದಾನೆ.
ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಮೊದಲು ದೂರು ನೀಡುವಂತೆ ಸೂಚನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)