ಹೆಂಡ್ತಿ ಮಾತು ಕೇಳಿ ಕೋಟಿ..ಕೋಟಿ ಹಣ ಗೆದ್ದ ಪತಿರಾಯ! ಜಾಕ್​ಪಾಟ್​​ ಅಂದ್ರೆ ಇದು...lottery ticket

Lottery
Published on

ನ್ಯೂಯಾರ್ಕ್: ( lottery ticket  ) ಹೆಂಡತಿ ಹೇಳಿದ್ದನ್ನು  ಕೆಲವೊಮ್ಮೆ ಆದರೂ ಕೇಳಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ ನೀಡುವ ಘಟನೆಯೊಂದು ನಡೆದಿದೆ. ಹೆಂಡ್ತಿ ಹೇಳಿದ್ದನ್ನು ಕೇಳಿ ವ್ಯಕ್ತಿಯೊಬ್ಬ ಕೋಟಿ.. ಕೋಟಿ.. ಹಣವನ್ನು  ಸಂಪಾದನೆ ಮಾಡಿದ್ದಾನೆ.

ಲಿಯಾನ್ ಎಸ್. ಅಮೆರಿಕದ ಅರ್ಕಾನ್ಸಾ ನಿವಾಸಿ. ಈತ ಭೀತ್‌ವಿಲ್ಲೆಯ ಪೆಟ್ರೋಲ್ ಪಂಪ್ ಬಳಿ ಇದ್ದಾಗ ಆತನ ಮಡದಿ ಲಾಟರಿ ಟಿಕೆಟ್ ತೆಗೆದಕೊಳ್ಳಿ ಎಂದು ಗಂಡನಿಗೆ ಒತ್ತಾಯ ಮಾಡಿದ್ದಾಳೆ. ಅದ್ಯಾಕೋ ಲಾಟರಿ ಗೆದ್ದೇ ಗೆಲ್ಲುತ್ತೇವೆ ಅನ್ನುವ ವಿಶ್ವಾಸ, ಹೆಂಡತಿಯೇ ಒತ್ತಾಯ ಮಾಡಿದ ಮೇಲೆ ಇಲ್ಲ ಅನ್ನಲಾದೀತೇ? 10 ಡಾಲರ್ ಕೊಟ್ಟು ಟಿಕೆಟ್ ಖರೀದಿಸಿಯೇ ಬಿಟ್ಟ ಲಿಯಾನ್.

ಸ್ಟಾಚ್ ಮಾಡಿ ನೋಡಿದರೆ ಇಬ್ಬರು ಸಂತೋಷದಿಂದ ಕುಣಿದಾಡಿದ್ದಾರೆ. ಏಕೆಂದರೆ ಅವರು ಕೊಂಡ ಟಿಕೆಟ್‌ಗೆ ಬರೋಬ್ಬರಿ ಎರಡು ಲಕ್ಷ ಡಾಲರ್ ಬಹುಮಾನ ಬಂದಿತ್ತು.  ಭಾರತೀಯ ರೂಪಾಯಿಗಳಲ್ಲಿ ಇದು ಸುಮಾರು 1.72 ಕೋಟಿ ರೂ.ಗಳಾಗುತ್ತದೆ.

ಈಗ ಲಿಯಾನ್  'ಹೆಂಡತಿ ಹೇಳಿದರೇ ಕೇಳಬೇಕು' ಎಂದು ಪತ್ನಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು ಹೇಳಿದ್ದಾರೆ. ಹೀಗೆ ಗೆದ್ದ ಹಣವನ್ನು ಮಗಳ ವಿದ್ಯಾಭ್ಯಾಸಕ್ಕೆ ಇಟ್ಟಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net