ಕುತ್ತಿಗೆಗೆ ಚುಚ್ಚಿಕೊಂಡಿದ್ದ ತ್ರಿಶೂಲಸಹಿತ ಶಸ್ತ್ರಚಿಕಿತ್ಸೆಗಾಗಿ 65 ಕಿಲೋಮೀಟರ್​ ಪ್ರಯಾಣಿಸಿದ ಭೂಪ!

Trishul F
Published on

ಕೋಲ್ಕತ: ಆತನ ಕುತ್ತಿಗೆಗೆ ತ್ರಿಶೂಲ ಚುಚ್ಚಲಾಗಿತ್ತು, ಹಾಗೆ ಚುಚ್ಚಿದ್ದ ತ್ರಿಶೂಲಸಹಿತ ಆತ ಚಿಕಿತ್ಸೆಗಾಗಿ 65 ಕಿಲೋಮೀಟರ್ ಪ್ರಯಾಣಿಸಿದ್ದಾನೆ. ಇಂಥದ್ದೊಂದು ವಿಚಿತ್ರ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಕೋಲ್ಕತದ ಕಲ್ಯಾಣಿ ನಿವಾಸಿ ಭಾಸ್ಕರ್ ರಾಮ್​ ಗಾಯಗೊಂಡ ವ್ಯಕ್ತಿ. ಭಾನುವಾರ ರಾತ್ರಿ ಈ ಪ್ರಕರಣ ನಡೆದಿದೆ. ಕ್ಷುಲ್ಲಕ ವಿಷಯಕ್ಕೆ ಮನೆಯಲ್ಲಿ ಸೋದರಿ ಜತೆ ನಡೆದ ಜಗಳದಲ್ಲಿ ಈತ 150 ಹಳೆಯ ತ್ರಿಶೂಲವನ್ನು ತನ್ನ ಕುತ್ತಿಗೆಗೆ ಚುಚ್ಚಿಕೊಂಡಿದ್ದಾನೆ. ಅದು ಕುತ್ತಿಗೆಯಲ್ಲೇ ಸಿಕ್ಕಿಕೊಂಡಿತ್ತು.

ಬಳಿಕ ಆತ ಚಿಕಿತ್ಸೆಗಾಗಿ ಹಾಗೆ ಚುಚ್ಚಿಕೊಂಡಿದ್ದ ತ್ರಿಶೂಲಸಹಿತ 65 ಕಿಲೋಮೀಟರ್ ಕ್ರಮಿಸಿ, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಆತ ಆಸ್ಪತ್ರೆಗೆ ತೆರಳಿದ ಬಳಿಕ ಯಾವುದೇ ನೋವು ಇಲ್ಲ ಎಂದು ಕೂಡ ಹೇಳಿ ಅಚ್ಚರಿ ಮೂಡಿಸಿದ್ದಾನೆ. ಅದಾಗ್ಯೂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಚುಚ್ಚಿಕೊಂಡಿದ್ದ ತ್ರಿಶೂಲವನ್ನು ತೆಗೆದಿದ್ದಾರೆ. ಸುಮಾರು 150 ವರ್ಷಗಳ ಇತಿಹಾಸ ಇರುವ ತ್ರಿಶೂಲವನ್ನು ಆತ ಮನೆಯಲ್ಲಿ ಇರಿಸಿಕೊಂಡು ಪೂಜಿಸುತ್ತಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net