ವ್ಯಕ್ತಿಯ ಬಟ್ಟೆ ಹರಿದು ಅಮಾನುಷವಾಗಿ ಥಳಿಸಿದ ಪುಂಡರು! ವಿಡಿಯೋ ವೈರಲ್

ವಿಜಯವಾಣಿ - 2024-01-27T144311.814
Published on

ಮಹೋಬಾ: ವ್ಯಕ್ತಿಯೊಬ್ಬನನ್ನು ಮುಖ್ಯರಸ್ತೆಯಲ್ಲಿ ಬಟ್ಟೆಹರಿದು ಅಮಾನುಷವಾಗಿ ಥಳಿಸಿದ ಆಘಾತಕಾರಿ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ವ್ಯಕ್ತಿಯನ್ನು ಅರೆಬೆತ್ತಲೆ ಮಾಡಿ ಬೆಲ್ಟ್, ಚಪ್ಪಲಿಯಿಂದ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆ ಉತ್ತರಪ್ರದೇಶದ ಮಹೋಬಾದಲ್ಲಿ ವರದಿಯಾಗಿದೆ.

ಪೋಲೀಸರ ಭಯವಿಲ್ಲದ ರೌಡಿಗಳು ನಗರದ ಮುಖ್ಯರಸ್ತೆಯಲ್ಲಿ ಯುವಕನನ್ನು ಎಳೆದಾಡಿ, ಆತನ ಅಂಗಿಯನ್ನು ಹರಿದು, ಚಪ್ಪಲಿಯಿಂದ ಮನಬಂದಂತೆ ಥಳಿಸಿದ್ದಾರೆ. ದುಷ್ಕರ್ಮಿಗಳ ಹೊಡೆತಕ್ಕೆ ಸಿಲುಕಿದ ವ್ಯಕ್ತಿ ಗಂಭೀರ ಗಾಯಗಳಿಂದ ಆಸ್ಪತ್ರೆ ಪಾಲಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ದೃಶ್ಯದಲ್ಲಿ ನೋಡುವಂತೆ ನಡುರಸ್ತೆಯಲ್ಲಿ ಸುಮಾರು 8 ಜನ ಪುಂಡರು ಯುವಕನ ಮೇಲೆ ದಾಳಿ ಮಾಡಿದ್ದು, ಮನಬಂದಂತೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆಗೈದಿದ್ದಾರೆ. ಘಟನೆಯ ಹಿಂದಿನ ಕಾರಣವೇನು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದುಷ್ಕರ್ಮಿಗಳ ಗುರುತು ಸಹ ಇನ್ನೂ ಪತ್ತೆಯಾಗಿಲ್ಲ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net