ಮಾವನಿಗೆ ಗುಂಡಿಟ್ಟು ಕೊಂದ ಅಳಿಯ; ಪ್ರಕರಣದ ಹಿಂದಿದೆ 26 ವರ್ಷದ ಹಿಂದಿನ ಸೇಡು

fireing
Published on

ವಾರಣಾಸಿ: ಸೋದರ ಅಳಿಯನೊಬ್ಬ ತನ್ನ ಮಾವನಿಗೇ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆ ನಡೆದು ಐದೇ ದಿನದಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ನವೆಂಬರ್​ 21ರಂದು ಚೊಟ್ಟಾಲಾಲ್ಪುರ ಹೆಸರಿನ ಊರಿನಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿತ್ತು. ಕೊಲೆಯಾದಾಗಿನಿಂದ ಆತನ ಸೋದರ ಅಳಿಯ ಫರೀದ್​ ಖಾನ್​ ಕಾಣೆಯಾಗಿದ್ದ. ವಾರಣಾಸಿಯಿಂದ ಹೊರಟಿದ್ದ ಆತ ನೇಪಾಳಕ್ಕೆ ಹೋಗಿ ನೆಲೆಸಿದ್ದ ಎನ್ನಲಾಗಿದೆ. ಮೂರ್ನಾಲ್ಕು ದಿನ ಕಳೆದ ನಂತರ ತನ್ನ ಬಳಿ ಇದ್ದ ಹಣವೆಲ್ಲ ಖಾಲಿಯಾದ ಹಿನ್ನೆಲೆಯಲ್ಲಿ ಆತ ವಾರಣಾಸಿಗೆ ವಾಪಾಸಾಗಿದ್ದಾನೆ. ಆ ಸಮಯದಲ್ಲಿ ಆತನನ್ನು ಬಂಧಿಸಿದ ಪೊಲೀಸರು ಕೊಲೆಯ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಫರೀದ್​ ಖಾನ್​ನ ತಂದೆಯನ್ನು ಆತನ ಸೋದರ ಮಾವ 26 ವರ್ಷಗಳ ಹಿಂದೆ ಕೊಲೆ ಮಾಡಿದ್ದನಂತೆ. ಆ ಸೇಡು ಆತನಿಗೆ 26 ವರ್ಷಗಳಿಂದಲೂ ಕಾಡುತ್ತಿತ್ತಂತೆ. ಅದೇ ಹಿನ್ನೆಲೆಯಲ್ಲಿ ಮಾವನ ಕೊಲೆಯನ್ನು ಮಾಡಿದೆ ಎಂದು ಫರೀದ್​ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net