

ಥಾಣೆ: ಪ್ರಿಯಕರನೊಂದಿಗೆ ಬೆತ್ತಲೆಯಾಗಿದ್ದ ಪತ್ನಿಯ ವಿಡಿಯೋ ನೋಡಿದ ಪತಿ, ಆಕೆಯನ್ನು ಕೊಂದು ನಂತರ ಶರಣಾದ ಘಟನೆ ಭಿವಂಡಿಯಲ್ಲಿ ನಡೆದಿದೆ.
ರಫೀಕ್ ಮೊಹಮದ್ ಯುನುಸ್(50) ಆರೋಪಿ. ಯುನುಸ್ ತನ್ನ ಪತ್ನಿ ನಸ್ರೀನ್ ಹಾಗೂ ಮೂವರು ಮಕ್ಕಳೊಂದಿಗೆ ಭಿವಂಡಿಯಲ್ಲಿ ವಾಸವಾಗಿದ್ದರು. ಆದರೆ ಲಾಕ್ಡೌನ್ ಬಂದಮೇಲೆ ಯುನುಸ್ ಕೆಲಸ ಹೋಗಿತ್ತು. ಆಗ ನಸ್ರೀನ್ ತನ್ನ ಮೂವರು ಮಕ್ಕಳೊಂದಿಗೆ ನಾಗಾನ್ನಲ್ಲಿರುವ ಸೋದರಿಯ ಮನೆಗೆ ಹೋಗಿದ್ದರು.
ಆದರೆ ಇತ್ತೀಚೆಗೆ ನಸ್ರೀನ್ ತನ್ನ ಪ್ರಿಯಕರ ಸದ್ದಾಂನೊಂದಿಗೆ ಬೆತ್ತಲೆಯಾಗಿ ಇದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದನ್ನು ನೋಡಿ ಕೆಂಡಾಮಂಡಲನಾದ ಯುನುಸ್ ಸೀದಾ ನಸ್ರೀನ್ ಇದ್ದ ಸೋದರಿಯ ಮನೆಗೆ ಹೋಗಿ, ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.
ಪತ್ನಿಯ ಕತ್ತುಕೊಯ್ದ ಯುನುಸ್ ಪರಾರಿಯಾಗದೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ನನ್ನ ಪತ್ನಿ ಇನ್ನೊಬ್ಬನೊಂದಿಗೆ ಬೆತ್ತಲೆಯಾದ ವಿಡಿಯೋ ನೋಡಿ ತೀವ್ರ ನಾಚಿಕೆಯಾಯಿತು. ಇದು ನಮ್ಮ ಮನೆತನದ ಮರ್ಯಾದಿ ಪ್ರಶ್ನೆ ಎಂದು ಆರೋಪಿ ಹೇಳಿದ್ದಾರೆ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)