VIDEO| ಕೆಲಸದ ವೇಳೆ ನಿದ್ದೆ; ಈತ ಮಾಡಿದ ಎಡವಟ್ಟೇನು ಗೊತ್ತಾ?

Untitled design - 2023-08-31T170901.268
Published on

ನ್ಯೂಯಾರ್ಕ್​: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ದಿನನಿತ್ಯದ ಕೆಲಸ ಮುಗಿಸಿ, ಮನೆಗೆ ಬಂದ ಬಳಿಕ ಹೆಚ್ಚಿನ ಆಯಾಸದಿಂದ ನಿದ್ದೆಯ ಜೊಂಪು ವೇಗವಾಗಿ ಆವರಿಸಿಕೊಳ್ಳುತ್ತದೆ. ಕೆಲವರು ಕೆಲಸ ಮಾಡುವ ವೇಳೆ ತೂಕಡಿಕೆ ಕಾಡಿದರೆ ಕೂಡಲೇ ಮುಖ ತೊಳೆದುಕೊಂಡು ಕಾರ್ಯವನ್ನು ಮುಂದುವರಿಸುತ್ತಾರೆ.

ಆದ್ರೆ, ಕೆಲಸದ ಮಧ್ಯೆ ನಿದ್ರೆ ಮಾಡಿದರೆ ಏನ್ನಲ್ಲಾ ತೊಂದರೆಗಳು ಎದುರಾಗುತ್ತದೆ, ಯಾವೆಲ್ಲಾ ಪರಿಣಾಮಗಳಿಗೆ ತುತ್ತಾಗಬೇಕಾಗುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳನ್ನು ನಾವು ಈ ಹಿಂದೆ ಗಮನಿಸಿದ್ದೇವೆ.

ಸದ್ಯ ಇಲ್ಲೊಂದು ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದ್ದು, ಕೆಲಸಗಾರನೊಬ್ಬ ತಾನು ಕೆಲಸ ಮಾಡುವ ವೇಳೆ ವಿಪರೀತ ನಿದ್ದೆಗೆ ತುತ್ತಾಗಿ, ಎಡವಟ್ಟು ಮಾಡಿಕೊಂಡಿದ್ದಾನೆ. ದೃಶ್ಯದಲ್ಲಿ ಫ್ಯಾಕ್ಟರಿಯೊಳಗೆ ವಸ್ತುಗಳನ್ನು ಜೋಡಿಸುವ ಕಿರು ವಾಹನ ಚಲಾಯಿಸುತ್ತಿದ್ದ ಕಾರ್ಮಿಕನೊಬ್ಬ ಶೀಘ್ರ ನಿದ್ದೆಗೆ ಜಾರಿದ್ದಾನೆ.

ಇದರ ಪರಿಣಾಮ ಜೋಡಿಸಿಟ್ಟಿದ್ದ ವಸ್ತುಗಳಿಗೆ ತಕ್ಷಣವೇ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ಎತ್ತರದಲ್ಲಿದ್ದ ರಾಶಿ ರಾಶಿ ಫ್ಯಾಕ್ಟರಿ ಉತ್ಪನ್ನಗಳು ಕೆಳಗೆ ಉರುಳಿ ಬಿದ್ದಿದೆ. ಈ ವಿಡಿಯೋ ಕಾರ್ಖಾನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net