

ಲಂಡನ್: ( Plane ) ಲಂಡನ್ ಲುಟನ್ ವಿಮಾನ ನಿಲ್ದಾಣದಿಂದ ಗ್ಲ್ಯಾಸ್ಗೋಗೆ ಹೊರಟಿದ್ದ ಈಜಿಜೆಟ್ ವಿಮಾನದಲ್ಲಿ 41 ವರ್ಷದ ವ್ಯಕ್ತಿಯೊಬ್ಬ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಮಾನದಲ್ಲಿ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಲಂಡನ್ ಲುಟನ್ ವಿಮಾನ ನಿಲ್ದಾಣದಿಂದ ಗ್ಲ್ಯಾಸ್ಗೋಗೆ ಈಜಿಜೆಟ್ ವಿಮಾನದಲ್ಲಿ 41 ವರ್ಷದ ವ್ಯಕ್ತಿ ತೊಂದರೆ ಉಂಟುಮಾಡಿದ್ದಾನೆ. ಬಾಂಬ್ ನಿಂದ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ವಿಮಾನ ಇಳಿದ ನಂತರ ಆತನನ್ನು ಬಂಧಿಸಲಾಗಿದೆ.
ವಿಮಾನದಲ್ಲಿ ಬಾಂಬ್ ಬೆದರಿಕೆ ಹಾಕುತ್ತಿರುವ ಯುವಕನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆ ಪ್ರಯಾಣಿಕ "ನಾನು ವಿಮಾನಕ್ಕೆ ಬಾಂಬ್ ಹಾಕುತ್ತೇನೆ, ಅಮೆರಿಕಕ್ಕೆ ಸಾವು, ಟ್ರಂಪ್‌ಗೆ ಸಾವು" ಎಂದು ಕೂಗುತ್ತಿರುವುದನ್ನು ಕಾಣಬಹುದು.
ಗ್ಲ್ಯಾಸ್ಗೋ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದರು. 41 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರೆದಿದೆ.