VIDEO| ಸ್ವಚ್ಛಂದವಾಗಿ ಹಾರಾಡ್ತಿದ್ದ ಪಕ್ಷಿಗೆ ಶೂಟ್​ ಮಾಡಿದ ಬೆನ್ನಲ್ಲೇ ಕರ್ಮದ ಫಲ ಅನುಭವಿಸಿದ ವ್ಯಕ್ತಿ!

Shoot
Published on

ನವದೆಹಲಿ: ಮಾಡಿದ ತಪ್ಪಿಗೆ ಶಿಕ್ಷೆ ತಪ್ಪಿದ್ದಲ್ಲ. ಅವರವರ ಕರ್ಮ ಫಲವನ್ನು ಅವರೇ ಅನುಭವಿಸಬೇಕು. ಕೆಲವರಿಗೆ ಕರ್ಮಫಲ ತಡವಾಗಿ ಸಿಗಬಹುದು. ಇನ್ನು ಕೆಲವರಿಗೆ ತಕ್ಷಣವೇ ಅವರ ಕರ್ಮಫಲ ದೊರೆಯುತ್ತದೆ ಎಂಬ ಹಿರಿಯರ ಮಾತಿಗೆ ಪುಷ್ಠಿ ನೀಡುವಂತಹ ವಿಡಿಯೋವೊಂದು ವೈರಲ್​ ಆಗಿದೆ.

ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಪಕ್ಷಿಯನ್ನು ಗುಂಡಿಕ್ಕಿ ಕೊಲ್ಲಲು ಯತ್ನಿಸಿದ ವ್ಯಕ್ತಿಯೊಬ್ಬ ಮರುಕ್ಷಣವೇ ತನ್ನ ಕರ್ಮದ ಫಲವನ್ನು ಅನುಭವಿಸಿದ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಶಾಂತ್​ ನಂದಾ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಗ್ರಾಮವೊಂದರ ಮೈದಾನದಲ್ಲಿ ನಿಂತಿರುವ ದೊಡ್ಡ ಮೀಸೆಯುಳ್ಳ ವ್ಯಕ್ತಿಯೊಬ್ಬ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹಕ್ಕಿಗೆ ಗನ್​ನಿಂದ ಶೂಟ್​ ಮಾಡುತ್ತಾನೆ. ಹಕ್ಕಿಯ ರೆಕ್ಕೆಗೆ ಗುಂಡು ತಾಗುತ್ತದೆ. ಆದರೆ, ಪಕ್ಷಿ ಕೆಳಕ್ಕೆ ಬೀಳದೆ ವ್ಯಕ್ತಿಯ ಕಡೆಗೆ ಧಾವಿಸಿ ಬಂದು ಆತನ ಬಲಭಾಗದ ಕಣ್ಣಿಗೆ ಕುಕ್ಕುತ್ತದೆ. ಬಳಿಕ ತನ್ನ ಕಣ್ಣನ್ನು ಕೈನಿಂದ ಮುಚ್ಚಿಕೊಂಡು ವ್ಯಕ್ತಿ ನೋವಿನಿಂದ ನರಳುವುದನ್ನು ನೋಡಬಹುದಾಗಿದೆ.

ಇತ್ತ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ವ್ಯಕ್ತಿ ಶೂಟ್​ ಮಾಡಿದವನಿಗೆ ಆದ ಗತಿಯನ್ನು ನೋಡಿ ಗಹಗಹಿಸಿ ನಗುತ್ತಾನೆ. ಈ ವಿಡಿಯೋವನ್ನು ಸುಶಾಂತ್​ ನಂದಾ ಅವರು ಶೇರ್​ ಮಾಡಿಕೊಂಡಿದ್ದು, ಕರ್ಮ ಎಂದು ಅಡಿಬರಹ ನೀಡಿದ್ದಾರೆ.

ಜನವರಿ 30ರಂದು ವಿಡಿಯೋ ಅಪ್​ಲೋಡ್​ ಮಾಡಲಾಗಿದ್ದು, ಈವರೆಗೆ 68 ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಸಿಕ್ಕಾಪಟ್ಟೆ ವೈರಲ್​ ಆಗುತ್ತಿರುವ ವಿಡಿಯೋಗೆ ಸಾಕಷ್ಟು ಕಾಮೆಂಟ್​ಗಳ ಸುರಿಮಳೆ ಬರುತ್ತಿದೆ. ವ್ಯಕ್ತಿಯ ಕರ್ಮಫಲಕ್ಕೆ ತಕ್ಕ ಉದಾಹರಣೆ ಎಂದು ಟ್ವೀಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net