ಕೆಲಸದಿಂದ ಮನೆಗೆ ಬಂದ ವ್ಯಕ್ತಿ ಪತ್ನಿಗಾಗಿ ಹುಡುಕಾಡಿದಾಗ ಆಕೆಯ ನಿಜ ಬಣ್ಣ ಬಯಲು: ತಂದೆಯೇ ವಿಲನ್​!

Worst Affair
Published on

ಸಂಬಂಧ ಎಂಬುದು ಅದ್ಭುತವಾಗಿರಬಹುದು ಆದರೆ, ಕೆಲವೊಮ್ಮೆ ಅದೇ ಸಂಬಂಧ ದುಃಖದಲ್ಲಿ ಮುಳುಗಿಸಿಬಿಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ದಾಂಪತ್ಯದಲ್ಲಿನ ದ್ರೋಹ. ತುಂಬಾ ನಂಬಿ ಮದುವೆಯಾದ ವ್ಯಕ್ತಿ ಬೇರೊಬ್ಬರ ಜತೆ ಸಲುಗೆಯಿಂದ ಇದ್ದಾಗ ಅದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ.

ಹೀಗೆ ಅನೇಕರು ಹೃದಯ ಬಿರಿಯುವಂತಹ ಅಕ್ರಮ ಸಂಬಂಧಗಳನ್ನು ಕೊಂಡುಕೊಂಡು ತಮಗಾದ ಕಹಿ ಅನುಭವದ ಎಳೆಯನ್ನು ರೆಡ್ಡಿಟ್​ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ರೆಡ್ಡಿಟ್​ ವೈಯಕ್ತಿಕ ವಿಚಾರಗಳನ್ನು ಚರ್ಚೆ ಮಾಡುವ ವೇದಿಕೆಯೂ ಆಗಿದ್ದು, ಇದರಲ್ಲಿ ಕಂಡು ಬಂದಂತಹ ವಿಚಿತ್ರ ಘಟನೆಯೊಂದು ನಿಮ್ಮ ಹುಬ್ಬೇರಿಸದೇ ಇರದು.

ವ್ಯಕ್ತಿಯೊಬ್ಬ ತಾನು ನೋಡಿದ ಅತ್ಯಂತ ಕೆಟ್ಟ ಅಕ್ರಮ ಸಂಬಂಧದ ಬಗ್ಗೆ ರೆಡಿಟ್​ ಜಾಲತಾಣ ವೇದಿಕೆಯಲ್ಲಿ ಹಂಚಿಕೊಂಡಿದ್ದಾನೆ. ಆದರೆ, ಇದು ಆತನ ವೈಯಕ್ತಿಕ ಅನುಭವವಾಗಿಲ್ಲ. ಬದಲಾಗಿ ಆತನ ಸ್ನೇಹಿತನ ಜೀವನದಲ್ಲಿ ನಡೆದಿದ್ದನ್ನು ಹೇಳಿಕೊಂಡಿದ್ದಾರೆ.

ನನ್ನ ಸ್ನೇಹಿತರೊಬ್ಬರು ಒಮ್ಮೆ ಕೆಲಸ ಮುಗಿಸಿ ಮನೆಗೆ ಮರಳಿದಾಗ ಪತ್ನಿಯನ್ನು ಹುಡುಕಿ ಹೊರಟ ಆತನಿಗೆ ಒಮ್ಮೆಲೆ ಶಾಕ್​ ಎದುರಾಗಿತ್ತು. ಆತನ ಪತ್ನಿ ಆತನ ತಂದೆಯೇ ಜತೆಯಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಿ ಆಘಾತಕ್ಕೀಡಾದನಂತೆ. ತಂದೆ ನಂಬುವುದೋ? ಅಥವಾ ಪತ್ನಿಯನ್ನು ನಂಬುವುದೋ? ಎಂಬ ಗೊಂದಲಕ್ಕೆ ಸಿಲುಕಿದ್ದಾಗಿ ಹೇಳಿಕೊಂಡ ಎಂದಿದ್ದಾರೆ. ಇದು ನಾನು ಜೀವನದಲ್ಲಿ ನೋಡಿ ಅತ್ಯಂತ ಕೆಟ್ಟ ಅನೈತಿಕ ಸಂಬಂಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು ರೆಡಿಟ್​ನಲ್ಲಿ ಚರ್ಚೆಯಾಗುತ್ತಿದ್ದಂತೆ ಇದು ಫೇಸ್​ಬುಕ್​ ಸೇರಿದಂತೆ ಮುಂತಾದ ಜಾಲತಾಣದಲ್ಲಿ ಹರಿದಾಡಿತು. ಸ್ಥಳೀಯವಾಗಿ ಇದೊಂದು ದೊಡ್ಡ ಡ್ರಾಮಾವನ್ನೇ ಸೃಷ್ಟಿ ಮಾಡಿತು. ಅನೇಕ ತಂದೆ ಮತ್ತು ಪತ್ನಿಯನ್ನು ದೂರವಿಡಲು ಆರಂಭಿಸಿದರು. ಇದೆನೋ ಸರಿ. ಜನರು ಮೋಸ ಮಾಡುತ್ತಾರೆಂದು ಕೇಳಿದ್ದೇನೆ. ಆದರೆ, ತಂದೆಯ ಜತೆಯಲ್ಲೇ ಹೇಗೆ ಸಾಧ್ಯ? ಎಂದು ಪ್ರಶ್ನಿಸುವ ಮೂಲಕ ತಮ್ಮ ಜೀವನ ಕೆಟ್ಟ ವ್ಯಥೆಯೊಂದನ್ನು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net