ಹಳಿಗಳ ಮೇಲೆ ನಿದ್ರೆಗೆ ಜಾರಿದ ಇಬ್ಬರು ವ್ಯಕ್ತಿಗಳು: ತಮ್ಮ ಮೇಲೆ ಟ್ರೈನ್​ ಹಾದು ಹೋದ್ರು ಸಣ್ಣ ಗಾಯವಿಲ್ಲದೆ ಬಚಾವ್! Railway Tracks ​

Railway Tracks
Published on

Railway Tracks : ಕುಡಿದ ಮತ್ತಿನಲ್ಲಿ ರೈಲ್ವೆ ಹಳಿಗಳ ಮೇಲೆಯೇ ನಿದ್ರೆಗೆ ಜಾರಿದ ವ್ಯಕ್ತಿಗಳಿಬ್ಬರನ್ನು ರಕ್ಷಣೆ ಮಾಡಿರುವ ಘಟನೆ ಕೇರಳದ ಅಲುವಾ ಮತ್ತು ಅಂಗಮಾಲಿ ನಡುವೆ ನಿನ್ನೆ (ಮಾರ್ಚ್​ 17) ರಾತ್ರಿ ನಡೆದಿದೆ.

ಶಾಲಿಮಾರ್ ಎಕ್ಸ್‌ಪ್ರೆಸ್, ಅಲುವಾ ನಿಲ್ದಾಣವನ್ನು ದಾಟಿ ಮುಂದೆ ಸಾಗುತ್ತಿತ್ತು. ಈ ವೇಳೆ ರೈಲು ನಿಧಾನವಾಗಿ ಚಲಿಸುತ್ತಿತ್ತು. ಅಷ್ಟರಲ್ಲಿ, ಲೋಕೋ ಪೈಲಟ್‌ಗಳು ಹಳಿಗಳ ಮೇಲೆ ಇಬ್ಬರು ವ್ಯಕ್ತಿಗಳು ಬಿದ್ದಿರುವುದನ್ನು ಗಮನಿಸಿದರು. ತಕ್ಷಣ ಲೋಕೋ ಪೈಲಟ್‌ಗಳು ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ, ರೈಲು ಸುಮಾರು ಐದು ಮೀಟರ್‌ಗಳಷ್ಟು ಮುಂದಕ್ಕೆ ಚಲಿಸಿತು. ಅಲ್ಲದೆ, ಇಂಜಿನ್ ಅವರ ಮೇಲೆಯೇ ಹಾದುಹೋಯಿತು. ಇದಾದ ನಂತರ ಲೋಕೋ ಪೈಲಟ್​ಗಳು ಹೊರಬಂದು ಇಬ್ಬರನ್ನು ಹೊರಗೆ ಬರಲು ಹೇಳಿದರು. ನಂತರ, ಇಬ್ಬರೂ ತಾವಾಗಿಯೇ ಹೊರಬಂದರು.

ಅವರಿಬ್ಬರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ರೈಲು ಸಿಬ್ಬಂದಿ ತಿಳಿಸಿದ್ದಾರೆ. ಆ ಇಬ್ಬರು ಕಂಠಪೂರ್ತಿ ಕುಡಿದು, ಪಾನಮತ್ತರಾಗಿ ರೈಲು ಹಳಿಗಳ ಮೇಲೆ ನಿದ್ರೆ ಜಾರಿದ್ದರು ಎಂದು ತಿಳಿದುಬಂದಿದೆ.

ರೈಲ್ವೆ ಹಳಿಗಳ ಮೇಲೆ ಮದ್ಯದ ಬಾಟಲಿಗಳು ಸಹ ಕಂಡುಬಂದಿವೆ. ಇಬ್ಬರ ಹೆಸರು ತಿಳಿದುಬಂದಿಲ್ಲ. ರೈಲ್ವೆ ಹಳಿಗಳ ಮೇಲೆ ಮಲಗಿದ್ದಕ್ಕಾಗಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net