ಭಾರಿ ಮಳೆ ತಂದ ಅವಾಂತರ; ಮನೆಗೆ ನುಗ್ಗಿದ ಹಾವನ್ನು ನೇರವಾಗಿ ಜಿಎಚ್‌ಎಂಸಿ ಕಚೇರಿಗೆ ತಂದು ಬಿಟ್ಟ ಯುವಕ!

snake (1)
Published on

ಹೈದರಾಬಾದ್: ಭಾರೀ ಮಳೆಯ ಪರಿಣಾಮದಿಂದ ಹೈದರಾಬಾದ್ ನಲುಗುತ್ತಿದ್ದು, ಹಲವಾರು ಪ್ರದೇಶಗಳಲ್ಲಿನ ನಿವಾಸಿಗಳು ತಮ್ಮ ಮನೆಗಳಿಗೆ ಸೊಂಟದ ಆಳದ ತನಕ ನೀರು ನುಗ್ಗಿದ ಪರಿಣಾಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಕೆಲವೆಡೆ ಜಲಾವೃತವಾಗಿದೆ. ಅದರಲ್ಲೂ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವೆಂದರೆ ಅಲ್ವಾಲ್ ಪ್ರದೇಶ. ಇಲ್ಲಿನ ಕೊಳಚೆ ನೀರು ತಗ್ಗು ಪ್ರದೇಶಗಳನ್ನು ಮುಳುಗಿಸಿರುವುದು ಮಾತ್ರವಲ್ಲದೆ, ಅನಿರೀಕ್ಷಿತ ಜೀವಿಗಳನ್ನು ಕರೆ ತರುತ್ತಿರುವುದು ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ.

ಬುಧವಾರದಂದು ಪ್ರವಾಹದಿಂದ ಅಲ್ವಾಲ್‌ನ ಮನೆಯೊಂದಕ್ಕೆ ಹಾವೊಂದು ಕೊಚ್ಚಿಕೊಂಡು ಹೋಗಿದೆ. ಜನರು ಹಾವು ನೋಡಿ ಭಯಭೀತರಾಗಿದ್ದಲ್ಲದೆ, ಹೆಚ್ಚುತ್ತಿರುವ ನೀರಿನ ಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆ ನಂತರ ನಿವಾಸಿಗಳು ತಕ್ಷಣವೇ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಅಧಿಕಾರಿಗಳ ಸಹಾಯ ಕೋರಿದರು. ಆದರೆ, ಆರು ಗಂಟೆಗಳ ಹಿಂದೆ ಕರೆ ಮಾಡಿದರೂ ಯಾವುದೇ ನೆರವು ಸಿಕ್ಕಿಲ್ಲ.

ಕೊನೆಗೆ ಮನೆಯಲ್ಲಿ ಹಾವು ಉಳಿದುಕೊಂಡಿದ್ದರಿಂದ ನಿರಾಶೆ ಮತ್ತು ಆತಂಕ ವ್ಯಕ್ತಪಡಿಸಿದಾಗ ಸಂತ್ರಸ್ತರ ಪೈಕಿ ಸಂಪತ್ ಕುಮಾರ್ ಎಂಬ ಯುವಕ ಹಾವನ್ನು ಹಿಡಿದು ಅಲ್ವಾಲ್ ಜಿಎಚ್ಎಂಸಿ ಕಚೇರಿಗೆ ತೆರಳಿದ್ದಾರೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಹಾವನ್ನು ಮೇಜಿನ ಮೇಲೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net