ಟ್ರಿಮ್ಮರ್ ಚಾರ್ಜ್ ಮಾಡುವಾಗ ವ್ಯಕ್ತಿಗೆ ಕರೆಂಟ್​​ ಶಾಕ್​​: ಸ್ಥಳದಲ್ಲೇ ಸಾವು | Trimmer

Trimmer
Published on

Trimmer: ಮನೆಯಲ್ಲಿ ಟ್ರಿಮ್ಮರ್ ಚಾರ್ಜ್ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಯೆಂಡಪಲ್ಲಿ ಮಂಡಲದ ಮುಂಜಂಪಲ್ಲಿ ಗ್ರಾಮದಲ್ಲಿ ಭಾನುವಾರ (ಜೂ.8) ನಡೆದಿದೆ.

32 ವರ್ಷದ NREGS ಕಾರ್ಯಕರ್ತನಾದ ತಿರುಪತಿ ಬಾತ್​​ರೂಮ್​​ನಲ್ಲಿ ಟ್ರಿಮ್ಮರ್​​​ ಚಾರ್ಜಿಂಗ್‌ಗಾಗಿ ಪ್ರಯತ್ನಿಸುತ್ತಿರುವಾಗ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ತಿರುಪತಿ ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಕುಟುಂಬದವರಿಗೆ ಹೇಳಿದರು.

ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net