ಹಾವು ಹಿಡಿದು ಎಲ್ಲಿ ಹಾಕಿಕೊಳ್ತಾನೆ ನೋಡಿ.. ಮೈ ಝುಂ ಎನ್ನಿಸುವ ವಿಡಿಯೋ

snake
Published on

ಬೆಂಗಳೂರು: ಹಾವು ಹಿಡಿಯುವವರನ್ನು ನೀವು ನೋಡಿರುತ್ತೀರ. ಹಾವನ್ನು ಹಿಡಿದ ನಂತರ ಯಾವುದಾದರೂ ಚೀಲಕ್ಕೆ ತುಂಬಿಕೊಂಡು ಹೋಗಿ ಬೇರೆಲ್ಲಾದರೂ ಬಿಟ್ಟು ಬಿಡುತ್ತಾರೆ. ಆದರೆ ಈ ವ್ಯಕ್ತಿ ಹಾಗಲ್ಲ. ಹಾವನ್ನು ಹಿಡಿದ ಈತ ಅದನ್ನು ಎಲ್ಲಿಟ್ಟುಕೊಳ್ಳುತ್ತಾನೆ ಎಂದು ನೋಡಿದರೆ ನೀವು ಒಮ್ಮೆ ಗಾಬರಿಯಾಗುವುದು ಗ್ಯಾರಂಟಿ.

ಸುಮಾರು ಒಂದು ಮಾರಿಗಿಂತಲೂ ಉದ್ದವಿರುವ ಹಾವನ್ನು ಈ ವ್ಯಕ್ತಿ ಕೋಲಿನ ಸಹಾಯದೊಂದಿಗೆ ಹಿಡೀತಾನೆ. ಅಂಥ ಕಷ್ಟವೇನು ಇಲ್ಲದೆ ಅರಾಮಾಗಿಯೇ ಹಾವು ಹಿಡಿದ ಈತ ಅದನ್ನು ಚೀಲದೊಳಗೆ ತುಂಬದೆಯೇ ತಾನು ತೊಟ್ಟಿದ್ದ ಲುಂಗಿಯೊಳಗೇ ತೂರಿಸಿಕೊಳ್ಳುತ್ತಾನೆ. ಅದಾದ ಮೇಲೆ ಲುಂಗಿಯನ್ನು ಮೇಲೆ ಸೊಂಟಕ್ಕೆ ಕಟ್ಟಿ ನಡೆದೇ ಬಿಡುತ್ತಾನೆ.

ಈ ರೀತಿ ಹಾವು ಹಿಡಿದು ಚೇಷ್ಟೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅನೇಕರು ಈ ವಿಡಿಯೋ ನೋಡಿ ನಕ್ಕಿದ್ದರೆ, ಇನ್ನು ಕೆಲವರು ಹಾವು ಸಿಟ್ಟಿಗೆದ್ದು ಕಚ್ಚೀತು ಜೋಕೆ ಎಂದು ಎಚ್ಚರಿಸಿದ್ದಾರೆ. ಈ ವಿಡಿಯೋದಲ್ಲಿರುವ ವ್ಯಕ್ತಿ ಯಾರು? ಎಲ್ಲಿಯ ವಿಡಿಯೋವಿದು ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net