ಐಸ್​ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿದ ಕಿರಾತಕ! ಗಂಡಹೆಂಡತಿ ಜಗಳಕ್ಕೆ ಮಕ್ಕಳಿಗೆ ಸಜೆ!

icecream
Published on

ಮುಂಬೈ : ಗಂಡಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಅದನ್ನು ಪೂರ್ಣ ರೀತಿಯಲ್ಲಿ ನಿರೂಪಿಸುವಂಥ ಪ್ರಸಂಗವೊಂದು ಮುಂಬೈನಲ್ಲಿ ನಡೆದಿದೆ. ಹೆಂಡತಿಯೊಂದಿಗೆ ನಡೆದ ಜಗಳದ ಹಿನ್ನೆಲೆಯಲ್ಲಿ ಪುರುಷನೊಬ್ಬ ತನ್ನ ಮಕ್ಕಳಿಗೆ ಐಸ್​ಕ್ರೀಮಿನಲ್ಲಿ ಇಲಿ ಪಾಷಾಣ ಬೆರೆಸಿ ನೀಡಿರುವ ಘಟನೆ ವರದಿಯಾಗಿದೆ.

ಮುಂಬೈನ ಮನ್​​ಖುರ್ದ್​ ಪ್ರಾಂತ್ಯದ ನಿವಾಸಿ ಮೊಹಮ್ಮದ್ ಅಲಿ ನೌಶಾದ್​ ಎಂಬುವ ಜೂನ್ 25 ರ ಶುಕ್ರವಾರ ಜಗಳದ ನಂತರ ತನ್ನ ಇಬ್ಬರು ಗಂಡು ಮಕ್ಕಳಿಗೆ ಮತ್ತು ಒಬ್ಬ ಹೆಣ್ಣುಮಗುವಿಗೆ ಐಸ್​ಕ್ರೀಂನಲ್ಲಿ ಇಲಿ ಪಾಷಾಣ ಸೇರಿಸಿ ನೀಡಿದ್ದಾನೆ. ಇದನ್ನು ತಿಂದ 5 ವರ್ಷದ ಆಲಿಶಾನ್ ಅಲಿ ಮೊಹಮ್ಮದ್​ ಅಸುನೀಗಿದ್ದರೆ, 7 ವರ್ಷದ ಅಲೀನಾ ಮತ್ತು 2 ವರ್ಷದ ಅರ್ಮಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಆಘಾತಕಾರಿ ಕೃತ್ಯದ ಬಗ್ಗೆ ಆರೋಪಿಯ ಹೆಂಡತಿಯು ದೂರು ನೀಡಿದ್ದು, ಮೊಹಮ್ಮದ್​ ಅಲಿ ನೌಶಾದ್​ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net