Snake: ಹಾವಿನೊಂದಿಗೆ ಆಟ..ವ್ಯಕ್ತಿ ಬಾಯಲ್ಲಿ ಅದು ಮಾಡಿದ್ದಾದರೂ ಏನು?

Snake
Published on

ಬೆಂಗಳೂರು: ಸಾಮಾಜಿಕ ಮಾಧ್ಯಮ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಸಾಕು ಪ್ರಾಣಿಗಳ ಜೊತೆಗೆ ವಿಷಜಂತುಗಳೊಂದಿಗೆ ವರ್ತಿಸುವ ಫೋಟೋ, ವೀಡಿಯೋಗಳು ಹೆಚ್ಚಾಗಿ ಪ್ರಚಾರ ಪಡೆದುಕೊಳ್ಳುತ್ತಿವೆ. ಇತ್ತೀಚೆಗೆ ವ್ಯಕ್ತಿಯೊಬ್ಬ ಹಾವಿ(Snake)ನೊಂದಿಗೆ ವಿನೂತನ ಕಸರತ್ತು ನಡೆಸಿರುವ ವೀಡಿಯೋ ವೈರಲ್​ ಆಗುತ್ತಿದೆ. ಆತ ಹಾವನ್ನು ಕೊರಳಿಗೆ ಹಾಕಿಕೊಂಡು ಬಳಿಕ ಬಾಯಲ್ಲಿ ಕಚ್ಚಿ ನಿಂತಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ವಿಡಿಯೋದಲ್ಲಿರುವಂತೆ ವ್ಯಕ್ತಿ ಹಾವಿನೊಂದಿಗೆ ವಿನೂತನ ಕಸರತ್ತು ನಡೆಸಿದ್ದಾನೆ. ಮೊದಲು ಹಾವನ್ನು ಕೊರಳಿಗೆ ಸುತ್ತಿಕೊಂಡಿದ್ದಾನೆ. ಇದನ್ನು ನೋಡಿ ಅಲ್ಲಿದ್ದವರೆಲ್ಲ ಬೆಚ್ಚಿಬಿದ್ದರು. ಅಷ್ಟರಲ್ಲಿ ಮತ್ತೊಂದು ಅಪಾಯಕಾರಿ ಸಾಹಸ ಮಾಡಿ ದ್ದಾನೆ.

ತನ್ನ ಕತ್ತಿನಲ್ಲಿದ್ದ ಹಾವನ್ನು ಕೈಯಲ್ಲಿ ಹಿಡಿದು ಅದರ ತಲೆಯನ್ನು ಬಾಯಿಗೆ ಹಾಕಿಕೊಂಡ. ಹಾವು ಅವನ ನಾಲಿಗೆಯನ್ನು ಬಲವಾಗಿ ಕಚ್ಚಿತು. ಆದರೆ ಆ ವ್ಯಕ್ತಿ ಯಾವುದೇ ಭಯವಿಲ್ಲದೆ ಹಾವನ್ನು ಹಿಡಿದಿದ್ದ. ಹಾವು ಮನುಷ್ಯನ ನಾಲಿಗೆಯನ್ನು ಬಹಳ ಹೊತ್ತು ಕಚ್ಚಿಹಿಡಿದಿತ್ತು. ನೆರೆದಿದ್ದವರು ಆತನನ್ನು ಹುರಿದುಂಬಿಸುತ್ತಿರುವುದು ಕಂಡುಬಂತು.

ಹಾವು ವಿಷರಹಿತವಾಗಿ ಕಾಣುತ್ತದೆ. ಆದರೆ, ಹಾವಿನೊಂದಿಗೆ ಆತ ಭೀಕರ ಸಾಹಸ ಮಾಡುತ್ತಿರುವುದನ್ನು ಕಂಡು ಎಲ್ಲರೂ ಹೌಹಾರಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು "ಅಯ್ಯೋ.. ಇದು ತುಂಬಾ ವಿಚಿತ್ರ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net