ರಾಮಮಂದಿರ ಮೇಲೆ ದಾಳಿಗೆ ಷಡ್ಯಂತ್ರ; ವಿಚಾರಣೆ ವೇಳೆ ಹೊರಬಂತು ಸ್ಫೋಟಕ ಅಂಶ

Abdul Rehman
Published on

ನವದೆಹಲಿ: ಅಯೋಧ್ಯೆಯಲ್ಲಿರುವ ರಾಮಮಂದಿರ ದಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಗುಜರಾತ್ ಹಾಗೂ ಹರಿಯಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನನ್ನು ಉತ್ತರಪ್ರದೇಶದ ಫೈಜಾಬಾದ್‌ ನಿವಾಸಿ ಅಬ್ದುಲ್ ರೆಹಮಾನ್ (19) ಎಂದು ಗುರುತಿಸಲಾಗಿದೆ. 

ಬಂಧಿತನಿಂದ ಎರಡು ಹ್ಯಾಂಡ್ ಗ್ರನೇಡ್​ಗಳು ಮತ್ತು ಕೆಲವು ಆಕ್ಷೇಪಾರ್ಹ ಪ್ರಕಟಣೆಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಗ್ರನೇಡ್​ಗಳನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿದೆ. ಈತ ರಾಮಮಂದಿರ ಸೇರಿ ಹಲವು ಧಾರ್ವಿುಕ ಸ್ಥಳಗಳಲ್ಲಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದ ಎಂದು ತಿಳಿದು ಬಂದಿದೆ. ಗುಜರಾತ್ ಎಟಿಎಸ್ ಅಧಿಕಾರಿಗಳು ಶಂಕಿತ ಉಗ್ರನನ್ನು ಗುಜರಾತ್​ಗೆ ಕರೆದೊಯ್ದು, ವಿಚಾರಣೆ ನಡೆಸುತ್ತಿದ್ದಾರೆ. ಮಾಂಸದ ಅಂಗಡಿ ನಡೆಸುತ್ತಿದ್ದ ರೆಹಮಾನ್ ಬಿಡುವಿನ ಸಮಯದಲ್ಲಿ ಆಟೋವನ್ನು ಓಡಿಸುತ್ತಿದ್ದ. ಬಂಧಿತನನ್ನು ಎಟಿಎಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 10 ದಿನಗಳ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಹಲವಾರು ಜಮಾತ್ ಹಾಗೂ ಇಸ್ಲಾಮಿಕ್ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ರೆಹಮಾನ್​ನನ್ನು ಬಳಸಿಕೊಂಡು ಐಸಿಸ್ ಅಯೋಧ್ಯೆ ಮೇಲೆ ದಾಳಿಗೆ ಸಂಚು ರೂಪಿಸಿತ್ತು. ಇದಲ್ಲದೆ ಈತ 2024ರಲ್ಲಿ ದೇವಸ್ಥಾನ ಉದ್ಘಾಟನೆಯಾದ ಬಳಿಕ ಹಲವು ಬಾರಿ ಪರಿಶೀಲನೆ ನಡೆಸಿದ್ದ ಎಂದು ತಿಳಿದು ಬಂದಿದ್ದು, ಎಟಿಎಸ್​ ಅಧಿಕಾರಿಗಳು ವಿಸ್ತೃತ ತನಿಖೆಯನ್ನು ನಡೆಸುತ್ತಿದ್ದಾರೆ.

Ayodhya

ಬಂಧನ ಹೇಗೆ?

ಗುಜರಾತ್ ಎಟಿಎಸ್ ಅಧಿಕಾರಿಗಳು ಬೇರೊಂದು ಪ್ರಕರಣದಲ್ಲಿ ಬಂಧಿಸಿದ್ದ ವ್ಯಕ್ತಿಯಿಂದ ಅಬ್ದುಲ್ ರೆಹಮಾನ್ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ವಿವಿಧ ತನಿಖಾ ಸಂಸ್ಥೆಗಳು ಅಬ್ದುಲ್ ಬಂಧನಕ್ಕೆ ಯೋಜನೆ ಸಿದ್ಧಪಡಿಸಿದ್ದರು. ಈತ ವಿದೇಶದಲ್ಲಿರುವ ಉಗ್ರರ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ತನಿಖೆ ವೇಳೆ ‘ನಾನು ರಾಮಮಂದಿರಕ್ಕೆ 2 ಬಾರಿ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದೆ. ಫೈಜಾಬಾದ್​ನಿಂದ ರೈಲಿನ ಮೂಲಕ ಫರೀದಾಬಾದ್​ಗೆ ಬಂದಿದ್ದೆ. ಫರೀದಾಬಾದ್​ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 2 ಹ್ಯಾಂಡ್ ಗ್ರನೇಡ್​ಗಳನ್ನು ನೀಡಿದ್ದ. ನಿರ್ದೇಶನ ನೀಡುತ್ತಿದ್ದ ವ್ಯಕ್ತಿ ನನಗೆ ಫರೀದಾಬಾದ್​ನಲ್ಲೇ ಉಳಿದುಕೊಳ್ಳುವಂತೆ ಸೂಚಿಸಿದ್ದ’ ಎಂದು ಅಬ್ದುಲ್ ಪೊಲೀಸರಿಗೆ ತಿಳಿಸಿದ್ದಾನೆ.

ದರ್ಶನದ ಸಮಯ ಬದಲಾವಣೆ

ಕುಂಭಮೇಳದ ಕಾರಣದಿಂದಾಗಿ ಭಕ್ತರ ಅನುಕೂಲಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮನ ದರ್ಶನದ ಸಮಯ ಬದಲಾವಣೆ ಮಾಡಲಾಗಿತ್ತು. ಕುಂಭಮೇಳ ಮುಗಿದ ಬೆನ್ನಲ್ಲೇ ಮತ್ತೆ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನದ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಮಂಗಳ ಆರತಿ ಬೆಳಗ್ಗೆ 4 ಗಂಟೆಗೆ ನಡೆಯಲಿದ್ದು, 4:15ರಿಂದ ಬೆಳಗ್ಗೆ 6ರ ವರೆಗೆ ಗರ್ಭ ಗುಡಿಯನ್ನ ಮುಚ್ಚಲಾಗುವುದು. ಬಳಿಕ 6 ಗಂಟೆಗೆ ಶೃಂಗಾರ ಆರತಿ ನಡೆಯಲಿದ್ದು, ಬೆಳಗ್ಗೆ 6. 30ರಿಂದ ಬೆಳಗ್ಗೆ 11:50ರವರೆಗೆ ಬಾಲ ರಾಮನ ದರ್ಶನ ಲಭ್ಯವಿರಲಿದೆ.

ಮಧ್ಯಾಹ್ನ 12ರಿಂದ 12:30ರವರೆಗೆ ಭೋಗ ಆರತಿ ಮತ್ತು ದೇವರ ದರ್ಶನ ಲಭ್ಯವಿದ್ದು, 1 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮಧ್ಯಾಹ್ನ 1ರಿಂದ ಸಂಜೆ 6:50 ರವರೆಗೆ ರಾಮನ ದರ್ಶನ ಲಭ್ಯವಿರಲಿದ್ದು, ಬಳಿಕ 7ರಿಂದ ರಾತ್ರಿ 9.30ರ ವರೆಗೆ ಬಾಲ ರಾಮನ ದರ್ಶನಕ್ಕೆ ಅವಕಾಶ ಇರಲಿದೆ. 9.45ಕ್ಕೆ ಸಂಧ್ಯಾರತಿ ಹಾಗೂ ರಾತ್ರಿ 10ಕ್ಕೆ ಶಯನ ಆರತಿಯೊಂದಿಗೆ 10.15ಕ್ಕೆ ಗರ್ಭಗುಡಿಯ ಬಾಗಿಲು ಮುಚ್ಚಲಾಗುವುದು ಎಂದು ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.

https://www.vijayavani.net/virat-kohli-scripts-history-with-twin-milestones-in-champions-trophy-semifinal

https://www.vijayavani.net/by-vijayendra-slams-congress-over-percentage-allegations

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net