ಮನುಷ್ಯನಿಗೆ ಆಧ್ಯಾತ್ಮಿಕ ಸಾಧನೆ ಅವಶ್ಯ

21sri-2 (1)
ನರಸಿಂಹವನದ ಗುರುನಿವಾಸದಲ್ಲಿ ವರ್ಧಂತಿ ಮಹೋತ್ಸವ ಸಲುವಾಗಿ ನಾನಾಪ್ರಾಂತ್ಯಗಳಿಂದ ಆಗಮಿಸಿದ ಸದ್ಭಕ್ತರಿಗೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅಹ್ನಿಕ ದರ್ಶನ ನೀಡಿದರು.
Published on

ಶೃಂಗೇರಿ: ಭಗವಂತನ ಅನುಗ್ರಹ ಪಡೆಯಬೇಕಾದರೆ ಜಪ, ಧಾನ್ಯ ಹಾಗೂ ಅಧ್ಯಯನ ಅತ್ಯಂತ ಪ್ರಮುಖ. ಲೌಕಿಕ ಕೆಲಸದ ಜತೆಗೆ ಮನುಷ್ಯನಿಗೆ ಆಧ್ಯಾತ್ಮಿಕ ಸಾಧನೆ ಅತಿ ಅಗತ್ಯ. ಇದರಿಂದ ನಮಗೆ ವಿಶೇಷ ಲ ದೊರಕುತ್ತದೆ ಎಂದು ಜಗದ್ಗುರು ಶೀ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು.
ನರಸಿಂಹವನದ ಗುರುನಿವಾಸದಲ್ಲಿ ವರ್ಧಂತಿ ಮಹೋತ್ಸವ ಸಲುವಾಗಿ ಸೋಮವಾರ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ನಿರಂತರ ಜಪದ ಪ್ರಕ್ರಿಯೆಯಿಂದ ನಮಗೆ ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ. ಧ್ಯಾನ ಮನಸ್ಸಿನ ವಿಕಾರಗಳನ್ನು ನಿಗ್ರಹಿಸುತ್ತದೆ. ಅಧ್ಯಯನದಿಂದ ಪರಿಜ್ಞಾನ ಪ್ರಾಪ್ತವಾಗುತ್ತದೆ. ಲೌಕಿಕ ದೃಷ್ಟಿ ಜೀವನ ನಡೆಸಲು ಬೇಕಾಗಿರುವ ಮೆಟ್ಟಲು. ಅಲೌಕಿಕ ಮೌಲ್ಯ ಜೀವನದ ಸಾರ್ಥಕತ್ಯೆಗೆ ಇರುವ ಉನ್ನತ ಮಾರ್ಗಗಳು. ಎರಡು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು. ಕಣ್ಣು ಎಲ್ಲವನ್ನೂ ನೋಡುತ್ತಿರುತ್ತದೆ. ಮನಸ್ಸು ಒಳ್ಳೆಯದನ್ನು, ಕೆಟ್ಟದನ್ನು ಅಲೋಚಿಸುತ್ತದೆ.ನಮಗೆ ಏನು ಬೇಕೋ ಅದನ್ನು ಮಾತ್ರ ಪಡೆಯಬೇಕು. ಬೇಡವಾದ ವಸ್ತುಗಳನ್ನು ಮನಸ್ಸಿನಿಂದ ಹೊರದೂಡಬೇಕು ಎಂದರು.
ಲೋಕದಲ್ಲಿ ಒಂದು ವಸ್ತು ಕಾಣಬೇಕಾದರೆ ಬೆಳಕಿನ ಅವಶ್ಯಕತೆ ಇದೆ. ಹಗಲು ಸೂರ್ಯ, ರಾತ್ರಿ ದೀಪ ನಮಗೆ ಬೆಳಕು ನೀಡುತ್ತದೆ. ಎಲ್ಲವನ್ನೂ ಗಮನಿಸಬೇಕಾದರೆ ಕಣ್ಣಿನ ಪ್ರಕಾಶಮಯ ಹೊಂಬೆಳಕು ಅಗತ್ಯವಿದೆ. ಕಣ್ಣು ಮುಚ್ಚಿದಾಗ ಬುದ್ಧಿ ಕಾರ್ಯನಿರ್ವಹಿಸುತ್ತದೆ. ಅದು ಸೂಕ್ಷ್ಮವಾದ ಇಂದ್ರಿಯ. ಅದಕ್ಕಿಂತ ಸೂಕ್ಷ್ಮವಾದುದು ಆತ್ಮ. ಅದು ಅತ್ಯಂತ ಚೈತನ್ಯವಾದ ಹೊಂಬೆಳಕು. ಇಂತಹ ಉಪದೇಶಗಳನ್ನು ನೀಡಿದ ಶ್ರೀ ಶಂಕರಭಗವತ್ಪಾದರು ಜಗತ್ತು ಕಂಡ ಅಪರೂಪದ ಲೋಕಗುರು ಎಂದು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net