ತನಗೆ ನೋಡಿದ್ದ ಹುಡುಗಿಯ ಜತೆ ಅಪ್ಪನ Marriage; ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ ಮಗ

Nashik Man
Published on

ನಾಶಿಕ್​: ಪ್ರತನಿತ್ಯ ನಮ್ಮ ಸುತ್ತ ನಡೆಯುವ ವಿಚಿತ್ರ ಘಟನೆಗಳಿಂದ ನಾವು ಒಂದು ಕ್ಷಣಕ್ಕಾದರೂ ಆಘಾತಕ್ಕೊಳಗಾಗುತ್ತೇವೆ. ಇದೀಗ ಮಹಾರಾಷ್ಟ್ರದ ನಾಶಿಕ್​ನಲ್ಲಿ ವ್ಯಕ್ತಿಯೋರ್ವ ತನ್ನ ಮಗ ಮದುವೆಯಾಗಬೇಕಿದ್ದ ಹುಡುಗಿಯನ್ನು ವಿವಾಹವಾಗುವ (Marriage) ಮೂಲಕ ತನ್ನ ಕುಟುಂಬದವರಿಗೆ ಆಘಾತವನ್ನುಂಟು ಮಾಡಿದ್ದು, ಈ ವಿಚಾರದಿಂದ ಆಘಾತಕ್ಕೊಳಗಾದ ವ್ಯಕ್ತಿಯ ಪುತ್ರ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾನೆ.

ಕೇಳಿ ಬಂದಿರುವ ಮಾಹಿತಿ ಪ್ರಕಾರ ನಾಶಿಕ್​ ನಿವಾಸಿಗಳಾದ ತಂದೆ ಹಾಗೂ ಮಗ ಇಬ್ಬರು ಜತೆಯಾಗಿ ವಾಸ ಮಾಡುತ್ತಿದ್ದರು. ತನ್ನ ಮಗನಿಗೆ ಮದುವೆ (Marriage) ಮಾಡಲು ಮುಂದಾದ ವ್ಯಕ್ತಿಯು ಹುಡುಗಿ ಹುಡುಕಲು ಶುರು ಮಾಡಿದ್ದಾರೆ. ಬಳಿಕ ಹುಡುಗಿಯೊಬ್ಬಳ ಜೊತೆ ಆತನಿಗೆ ವಿವಾಹವನ್ನು ನಿಶ್ಚಯಿಸಿದ್ದಾನೆ.

ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಮನೆಗೆ ಸೊಸೆಯಾಗಬೇಕಿದ್ದವಳನ್ನು ವರನ ತಂದೆ ಮದುವೆಯಾಗಿದ್ದು, ಮನೆಗೆ ಕರೆದುಕೊಂಡು ಬರುವ ಮೂಲಕ ಮಗನಿಗೆ ಶಾಕ್​ ಕೊಟ್ಟಿದ್ದಾನೆ. ತಾನು ಮದುವೆಯಾಗಬೇಕಿದ್ದ ಹುಡುಗಿಯನ್ನು ತನ್ನ ತಾಯಿಯ ಸ್ಥಾನದಲ್ಲಿ ನೋಡಲು ಸಾಧ್ಯವಿಲ್ಲವೆಂದು ಆ ಯುವಕ ಸನ್ಯಾಸಿಯಾಗಲು ಮುಂದಾಗಿದ್ದು, ಈ ಸುದ್ದಿ ಸಖತ್​ ಸದ್ದು ಮಾಡುತ್ತಿದೆ.

ತಾನು ಮದುವೆಯಾಗಬೇಕಿದ್ದ ಹುಡುಗಿಯನ್ನು ತನ್ನ ತಂದೆ ಮದುವೆಯಾಗಿದ್ದರಿಂದ ಬೇಸರಗೊಂಡು ಮನೆ ತೊರೆದಿರುವ ಯುವಕ ದೇವಸ್ಥಾನದಲ್ಲಿ ಕಾಲ ಕೆಳಯುತ್ತಿದ್ದು, ಅಲ್ಲಿಯೇ ಊಟ ಮಾಡಿ ರಸ್ತೆಬದಿ ಮಲಗುತ್ತಿದ್ದಾನೆ. ಯುವಕನ ತಂದೆಯ ನಡೆಯನ್ನು ಹಲವರು ಖಂಡಿಸಿದ್ದು, ಯುವತಿ ವಿರುದ್ಧ ಕಿಡಿಕಾರಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net