

Pit Bull : 11 ವರ್ಷದ ಬಾಲಕನೊಬ್ಬ ನಿಂತಿರುವ ಆಟೋದಲ್ಲಿ ಆಡುತ್ತಿರುವಾಗ ನಾಯಿಯ ಮಾಲಿಕ ಉದ್ದೇಶಪೂರ್ವಕವಾಗಿ ಆತನ ಮೇಲೆ ನಾಯಿಯನ್ನು ಛೂ ಬಿಟ್ಟು, ಕಚ್ಚುತ್ತಿರುವ ವಿಡಿಯೋ ಮಾಡಿ, ಸಂತಸ ವ್ಯಕ್ತಪಡಿಸಿದ ಘಟನೆ ಮುಂಬೈನ ಮನ್ಖುರ್ಡ್ ಬಳಿ ನಡೆದಿದೆ.
ದಾಳಿಗೊಂಡ ಬಾಲಕನ್ನು ಹಮ್ಜಾ ಎಂದು ಗುರುತಿಸಲಾಗಿದೆ. ಕೆಲವು ನಿಮಿಷಗಳ ನಂತರ ಬಾಲಕನ ಮೇಲೆ ನಾಯಿ ದಾಳಿ ನಡೆಸಿದ್ದು, ಆತನ ಗಲ್ಲವನ್ನು ಕಚ್ಚಿದೆ. ಹಾಗೇ ಆತನ ಬಟ್ಟೆಯನ್ನು ಎಳೆದಾಡಲು ಪ್ರಾರಂಭಿಸಿದೆ. ಆ ವೇಳೆ ಬಾಲಕ ಕಿರುಚಾಡಲು ಪ್ರಾರಂಭಿಸಿದರೂ, ಮಾಲೀಕ ನಾಯಿಯನ್ನು ಹಿಂಪಡೆಯದೇ ಬಾಲಕನ ಪ್ರತಿಕ್ರಿಯೆಗಳನ್ನು ನೋಡಿ ಸಂತೋಷ ಪಡುತ್ತಿದ್ದ ಎನ್ನಲಾಗುತ್ತಿದೆ.
ಈ ವಿಚಾರದ ಬಗ್ಗೆ ಬಾಲಕ ಪ್ರತಿಕ್ರಿಯೆ ನೀಡಿದ್ದು, ನಾಯಿ ನನ್ನನ್ನು ಕಚ್ಚಿತು. ನನ್ನ ಬಟ್ಟೆಯನ್ನು ಹರಿಯಲು ಪ್ರಾರಂಭಿಸಿತು. ನಾನು ಕಿರುಚಲು ಪ್ರಾರಂಭಿಸಿದೆ. ಮಾಲೀಕನಿಗೆ ಸಹಾಯ ಮಾಡುವಂತೆ ಬೇಡಿಕೊಂಡೆ ಆದರೆ, ಅವರು ನನ್ನ ಸಹಾಯಕ್ಕೆ ಬಾರದೆ ನನ್ನನ್ನು ನೋಡಿ ನಗುತ್ತಿದ್ದರು. ನಾಯಿ ಕಚ್ಚಿದ್ದರಿಂದ ಭಯ ಬೀತನಾಗಿದ್ದು, ಓಡಲು ಪ್ರಾರಂಭಿಸಿದೆ ನಾಯಿ ಕೂಡ ನನ್ನ ಹಿಂದೆ ಬರಲು ಪ್ರಾರಂಭಿಸಿತು ಎಂದು ತಿಳಿಸಿದ್ದಾನೆ.
ಹಮ್ಜಾ ತಂದೆಯ ದೂರಿನ ಮೇರೆಗೆ ನಾಯಿಯ ಮಾಲೀಕರಾದ ಮೊಹಮ್ಮದ್ ಸೊಹೈಲ್ (43) ಮೇಲೆ ಪೋಲಿಸರು ಭಾರತೀಯ ದಂಡ ಸಂಹಿತೆ ಪ್ರಕಾರ ಸೆಕ್ಸನ್ 291, 125, 35(ಎ) ಕೇಸನ್ನು ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)