PHOTO VIRAL | ಪಾರ್ಕಿಂಗ್​ ದಂಡ ತಪ್ಪಿಸಲು ಕಿರಾತಕ ಐಡಿಯಾ ಮಾಡಿದ ಬುದ್ಧಿವಂತ!

carparkinf
Published on

ತೈವಾನ್: ಜನನಿಬಿಡ ನಗರಗಳಲ್ಲಿ ವಾಹನ ಪಾರ್ಕ್​ ಮಾಡುವುದೇ ಕೆಲವೊಮ್ಮೆ ದುಃಸ್ವಪ್ನ. ಮನೆ ಜನನಿಬಿಡ ಪ್ರದೇಶದಲ್ಲಿದ್ದು ಪಾರ್ಕಿಂಗ್ ಸ್ಥಳ ಇಲ್ಲದಿದ್ದರೆ ಸಾಕಷ್ಟು ಕಿರಿಕಿರಿ ಅನುಭವಿಸಬೇಕು. ಕೆಲವೊಂದು ಬಾರಿ ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿ ದಂಡ ಕಟ್ಟುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ.

ತೈವಾನ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯ ಹೊರಗೆ ರಸ್ತೆಯಲ್ಲಿ ವಾಹನ ನಿಲ್ಲಿಸಿದ್ದಕ್ಕಾಗಿ ದಂಡ ವಿಧಿಸಿ ಸುಸ್ತಾದ ನಂತರ ಭಾರೀ ಬುದ್ಧಿವಂತ ನಡೆ ಇಟ್ಟಿದ್ದಾನೆ. ಇದನ್ನು ಕಂಡು ಜನರು ಫೋಟೊಗಳನ್ನು ಕ್ಲಿಕ್ಕಿಸಿದ್ದು ಇದೀಗ ಅವು ವೈರಲ್​ ಆಗಿವೆ.

ಛಾವಣಿಯ ಮೇಲೆ ಕಾರು ಪಾರ್ಕ್!

ತೈಪೆಯಲ್ಲಿರುವ ವ್ಯಕ್ತಿ ತನ್ನ ಅಪಾರ್ಟೆಂಟ್ ಕಟ್ಟಡದ ಮುಂದೆ ತನ್ನ ವ್ಯಾನ್‌ಗಳನ್ನು ನಿಲ್ಲಿಸಿದ್ದಕ್ಕಾಗಿ ಪದೇ ಪದೇ ದಂಡವನ್ನು ವಿಧಿಸಿದಾಗ ಈ ಕಿರಾತಕ ಐಡಿಯಾ ಕಂಡು ಹಿಡಿದಿದ್ದಾನೆ. ಈತ ತನ್ನ ವ್ಯಾನ್​ಅನ್ನು ಪಾರ್ಕ್​ ಮಾಡಲು ತನ್ನ ಅಪಾರ್ಟೆಂಟ್ ಕಟ್ಟಡದ ಛಾವಣಿಯ ಮೇಲೆ ಹತ್ತಿಸಿದ್ದ!

ಮೇಲ್ದಾವಣಿಯ ಮೇಲೆ ಎರಡು ವ್ಯಾನ್‌ಗಳನ್ನು ನಿಲ್ಲಿಸಲಾಗಿದ್ದು, ಒಂದು ಛಾವಣಿಯ ಎತ್ತರದ ಭಾಗದಲ್ಲಿದ್ದು ಇನ್ನೊಂದು ಕಾರು ಅದರ ಹಿಂಭಾಗದಲ್ಲಿ ನೇತಾಡುತ್ತಿರುವಂತೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆ ವ್ಯಕ್ತಿ ಚೀನಾ ಟೈಮ್ಸ್‌ಗೆ, "ಇದು ಕಟ್ಟಡದ ಮೇಲೆ ಪರಿಣಾಮ ಬೀರುವುದಿಲ್ಲ, ಗಲಾಟೆ ಮಾಡಬೇಡಿ" ಎಂದು ಹೇಳಿದ್ದಾನೆ!

The man wanted to avoid getting parking fines

ಕಟ್ಟಡವನ್ನು ಉಕ್ಕು ಮತ್ತು ಕಾಂಕ್ರೀಟ್‌ನಿಂದ ಮಾಡಲಾಗಿದ್ದು, ಎರಡು ವಾಹನಗಳ ತೂಕವನ್ನು ತಡೆದುಕೊಳ್ಳಲು ಇದು ಸುಲಭವಾಗಿ ಲಭ್ಯವಾಗಲಿದೆ ಎಂದು ಆತ ಹೇಳಿದ್ದಾನೆ.

ನಗರ ಅಧಿಕಾರಿಗಳು ವಾಹನಗಳನ್ನು ಛಾವಣಿಯಿಂದ ಇಳಿಸಲು ವ್ಯಕ್ತಿಯನ್ನು ಕೇಳಿಕೊಂಡಿದ್ದಾರೆ. ಆದರೆ, ಯಾವುದೇ ನಿಯಮಗಳನ್ನು ಉಲ್ಲಂಘಿಸದ ಕಾರಣ ಅಧಿಕಾರಿಗಳು ಏನೂ ಮಾಡಲು ಸಾಧ್ಯವಾಗಿಲ್ಲ. ಆ ವ್ಯಕ್ತಿ ಕಡೆಗೆ ಮೇಲ್ದಾವಣಿಯಿಂದ ಕೆಳಕ್ಕೆ ತಮ್ಮ ವ್ಯಾನ್​ಗಳನ್ನು ಇಳಿಸಿಲು ಒಪ್ಪಿಕೊಂಡಿದ್ದು ತಾನು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಪದೇ ಪದೇ ಹೇಳಿದ್ದಾನೆ.

ಆದರೆ ಛಾವಣಿಗೆ ಕಾರನ್ನು ಹತ್ತಿಸಿದ್ದು ಹೇಗೆ?!

ಈಗ ನಿಮ್ಮಲ್ಲಿ ಈತ ಕಾರನ್ನು ಛಾವಣಿಗೆ ಹತ್ತಿಸಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟಿರಬೇಕು. ಕಾರನ್ನು ಗೋಡೆಯ ಮೇಲೆ ಓಡಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಆತ ಛಾವಣಿಗೆ ತನ್ನ ಕಾರನ್ನು ಕ್ರೇನ್​ ಮೂಲಕ ಹತ್ತಿಸಿದ್ದ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net