120 ರೂಪಾಯಿ ಫಿಶ್ ಬಿಲ್​ ತಂದಿಟ್ಟ ಸಂಕಷ್ಟ! ಸೋದರ ಮಾವ ಎಂದೂ ಲೆಕ್ಕಿಸದ ಅಳಿಯ ಮಾಡಿದ್ದೇನು?

fish
Published on

ಭೋಪಾಲ್: ಪರಿಚಯಸ್ಥರ ಅಥವಾ ಸಂಬಂಧಿಕರ ಅಂಗಡಿಗಳಲ್ಲಿ ಏನಾದರೂ ಖರೀದಿಸಬೇಕೆಂದರೆ ನೂರು ಬಾರಿ ಯೋಚಿಸಬೇಕು. ಅದರಲ್ಲೂ ಸಾಲ ಹೇಳಿ ಹೋಗುವುದಂತೂ ಒಳ್ಳೆಯದಲ್ಲವೇ ಅಲ್ಲ ಎನ್ನುತ್ತಾರೆ ಕೆಲ ಹಿರಿಯರು. ಅದನ್ನು ಲೆಕ್ಕಿಸದ ವ್ಯಕ್ತಿಯೊಬ್ಬ ಮಾವನ ಅಂಗಡಿಯಲ್ಲಿ 120 ರೂಪಾಯಿ ಬಿಲ್ ಬಾಕಿಯಿಟ್ಟಿದ್ದಕ್ಕೆ ದುರಂತವೇ ನಡೆದುಹೋಗಿದೆ.

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಕಳ್ಳು ಹೆಸರಿನ ವ್ಯಕ್ತಿ ಫಿಶ್ ಫ್ರೈ ಅಂಗಡಿಯನ್ನು ಇಟ್ಟುಕೊಂಡಿದ್ದಾನೆ. ಆತನ ಅಂಗಡಿಗೆ ಹತ್ತಿರದಲ್ಲೇ ಆತನ ಸೋದರ ಮಾವ ಕಯುಮ್ ಖಾನ್ ಫಿಶ್ ಅಂಗಡಿ ಇಟ್ಟುಕೊಂಡಿದ್ದಾನೆ. ಯಾವಾಗಲೂ ಮಾವನ ಅಂಗಡಿಯಿಂದಲೇ ಫಿಶ್ ತಂದು ಫ್ರೈ ಮಾಡುತ್ತಿದ್ದ ಕಳ್ಳು, ಇತ್ತೀಚೆಗೆ ಅದೇ ರೀತಿ ಮಾವನ ಅಂಗಡಿಯಿಂದ ಫಿಶ್ ತಂದಿದ್ದ. ಅದರ ಬಿಲ್ 120 ರೂಪಾಯಿಯನ್ನು ಬಾಕಿಯಿಟ್ಟಿದ್ದ. ಮಾವ ಆ ಬಿಲ್​ ಅನ್ನು ಅಳಿಯನಿಗೆ ಫೋನ್​ನಲ್ಲಿ ಕಳಿಸಿದ್ದಾನೆ.

ಯಾವಾಗಲೂ ಮೀನು ಖರೀದಿಸುವ ನನಗೇ ನನ್ನ ಮಾವ ಬಿಲ್ ಕಳುಹಿಸಿದನಲ್ಲ ಎಂದು ಸಿಟ್ಟಿನಿಂದ ಕಳ್ಳು ಆತನೊಂದಿಗೆ ಜಗಳ ಆಡಿದ್ದಾನೆ. ಇಬ್ಬರ ಜಗಳ ತಾರಕಕ್ಕೇರಿದ್ದು, ಅಳಿಯ ಮಾವನನ್ನು ಕೊಂದೇ ಬಿಟ್ಟಿದ್ದಾನೆ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net