ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

teacher
Published on

ಮುಂಬೈ: ಅಕ್ರಮ ಸಂಬಂಧದಿಂದಾಗಿ ಅನೇಕ ಕುಟುಂಬಗಳೇ ಮುರಿದುಬೀಳುತ್ತವೆ. ಆದರೂ ಕೆಲವರು ಅಂತಹ ತಪ್ಪಿಗೆ ಕೈ ಹಾಕುವುದನ್ನು ನಿಲ್ಲಿಸುವುದಿಲ್ಲ. ಅದೇ ರೀತಿ ವ್ಯಕ್ತಿಯೊಬ್ಬ ಶಿಕ್ಷಕಿಯೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿ ನಂತರ ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಖಮ್‌ಗಾಂವ್ ತಾಲೂಕಿನ ಪಹುರ್ಜಿರಾ ನಿವಾಸಿ ಪ್ರಭುದಾಸ್ ಬೋಲೆಗೆ ಮದುವೆಯಾಗಿತ್ತು. ಆದರೆ ಹೆಂಡತಿಯೊಂದಿಗಿನ ಸಂಬಂಧ ಸಾಕಾಗದ ಆತ ವಿಧವೆ ಶಿಕ್ಷಕರಿಯೊಬ್ಬರ ಅಕ್ರಮ ಸಂಬಂಧದ ಬಲೆಗೆ ಬಿದ್ದಿದ್ದಾನೆ. ಮೊದ ಮೊದಲು ಸ್ನೇಹದ ರೂಪದಲ್ಲಿ ಆರಂಭವಾದ ಅವರ ಸಂಬಂಧ ಕೊನೆಗೆ ಸಾಕಷ್ಟು ಆಳವಾಗಿ ಬೇರೂರಿದೆ.

ಈ ಮಧ್ಯೆ ಶಿಕ್ಷಕಿ ತನ್ನ ಕೆಲಸ ಕಳೆದುಕೊಂಡಿದ್ದಾಳೆ. ಹಣಕ್ಕೆ ಸಾಕಷ್ಟು ತೊಂದರೆಯಾಗಿದೆ. ಆಗ ಉಪಾಯ ಮಾಡಿದ ಆಕೆ ಪ್ರಭುದಾಸ್​ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ನಾನು ಮನೆ ತೆಗೆದುಕೊಳ್ಳಬೇಕು, ನನಗೆ ಹಣ ಕೊಡು ಎಂದು ಕೇಳಿದ್ದಾಳೆ. ಆದರೆ ತನ್ನ ಬಳಿ ಹಣವಿಲ್ಲವೆಂದು ಆತ ಹೇಳಿದಾಗ, ಅವರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದಾಳೆ.

ಶಿಕ್ಷಕಿಯ ಬೆದರಿಕೆಗೆ ಹೆದರಿದ ಪ್ರಭುದಾಸ್ ಆಕೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ಕಳುಹಿಸಿ ಮೇ 16ರಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಹೆಂಡತಿ ಗಂಡನ ಸಾವಿಗೆ ಶಿಕ್ಷಕಿಯೇ ಕಾರಣವೆಂದು ಪೊಲೀಸರಲ್ಲಿ ದೂರು ನೀಡಿದ್ದಾಳೆ. ಶಿಕ್ಷಕಿಗೆ ಅನೇಕರು ಸಾಥ್​ ಕೊಟ್ಟಿದ್ದಾಗಿಯೂ ಹೇಳಲಾಗಿದೆ. ಇದೀಗ ಪೊಲೀಸರು ಆರೋಪಿತ ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net