7 ವರ್ಷದ ಬಾಲಕನನ್ನು ಕಚ್ಚಿದ್ದಕ್ಕೆ ಸಾಕು ನಾಯಿಯನ್ನೇ ಕೊಂದು ತಿಂದ ಭೂಪ!

dog
Published on

ಬ್ಯಾಂಕಾಕ್:‌ ಏಳು ವರ್ಷದ ತನ್ನ ಸೋದರಳಿಯನಿಗೆ ಕಚ್ಚಿದ್ದಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ತನ್ನ ಸಾಕು ನಾಯಿಯನ್ನೇ ಕೊಂದು ತಿಂದ ಘಟನೆ ಥೈಲಾಂಡ್‌ನಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಥಾಯ್ಲೆಂಡ್​ನ ವ್ಯಕ್ತಿಯನ್ನು 42 ವರ್ಷದ ಸಾಂಗ್‌ವುಟ್ ಚುಥಾಂಗ್ ಎಂದು ಗುರುತಿಸಲಾಗಿದೆ. ಈ ಘಟನೆ ಥೈಲ್ಯಾಂಡ್‌ನ ಚಿಯಾಂಗ್ ಮಾಯ್‌ನಲ್ಲಿ ನಡೆದಿದೆ.

ಆರೋಪಿ ಸಾಂಗ್​ವುಟ್​ ತನ್ನ ನಾಯಿಯನ್ನು ಕೊಂದು ತಿಂದ ವ್ಯಕ್ತಿಯ ವಿರುದ್ಧ ಮೇ 1ರಂದು ವಾಚ್‌ಡಾಗ್ ಥಾಯ್ಲೆಂಡ್​ನ ಫೌಂಡೇಶನ್ ದೂರು ನೀಡಿದೆ.  ಆರೋಪಿ ತನ್ನ 10 ವರ್ಷದ ಸಾಕು ನಾಯಿಯನ್ನು ಏಪ್ರಿಲ್ 29 ರಂದು ಕೊಂದಿದ್ದಾನೆ ಎಂದು ಸಿಸಿಟಿವಿ ದೃಶ್ಯಾವಳಿ ಸಮೇತ WDT ಸಂಕಂಪೇಂಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಾಂಗ್‌ವುಟ್ ತನ್ನ ಸಾಕು ನಾಯಿಯ ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಎಳೆದುಕೊಂಡು ಹೋಗಿ ಮರಕ್ಕೆ ನೇತು ಹಾಕುವ ಮೂಲಕ ಅತಿಕ್ರೂರವಾಗಿ ಸಾಯಿಸಿದ್ದಾನೆ. ನಾಯಿ ಸತ್ತ ಬಳಿಕ ಅದರ ದೇಹವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ಪ್ರಕರಣ ಸಂಬಂಧ ಆರೋಪಿ ಸಾಂಗ್‌ವುಟ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ತನಿಖೆಯ ವೇಳೆ ಶ್ವಾನವನ್ನು ಕೊಂದ ಕುರಿತು ಹೇಳಿದ್ದಾನೆ. ನಾಯಿಯನ್ನು ತಿಂದು ಅದರ ಮಾಂಸವನ್ನು ರೋಜ್ ಎಂಬ ಸ್ನೇಹಿತನೊಂದಿಗೆ ಹಂಚಿಕೊಂಡಿರುವುದಾಗಿ ತಿಳಿಸಿದ್ದಾನೆ. ಇತ್ತ ಪ್ರಕರಣ ಸಂಬಂಧ ಸಾಂಗ್‌ವುಟ್‌ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಫ್ರಿಡ್ಜ್‌ನಲ್ಲಿ ನಾಯಿ ಮಾಂಸ ಪತ್ತೆಯಾಗಿದೆ.

ಥಾಯ್ ಪೊಲೀಸರು ಸಾಂಗ್‌ವುಟ್‌ನ ಸ್ನೇಹಿತ ರೋಜ್‌ನನ್ನು ಸಹ ಬಂಧಿಸಿದ್ದಾರೆ. ಅವರಿಬ್ಬರಿಗೂ ಥಾಯ್ಲೆಂಡ್‌ನ ಕ್ರಿಮಿನಲ್ ಕಾನೂನಿನ ಸೆಕ್ಷನ್ 340, 296, 20 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net