

ರಾಜಸ್ಥಾನ: ಎರಡು ಬೈಕ್ ನಡುವೆ ಅಪಘಾತವಾಗಿದ್ದು, ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಓರ್ವ ಯುವಕ ಸಾವನ್ನಪ್ಪಿದ ಘಟನೆ ಶುಕ್ರವಾರ (ಸೆ.29) ರಾಜಸ್ಥಾನದ ಜೈಪುರದಲ್ಲಿ ಸಂಭವಿಸಿದೆ.
ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಇಕ್ಬಾಲ್ (ಮೃತ ವ್ಯಕ್ತಿ) ಎಂಬ ಯುವಕನಿಗೆ ಗಾಯವಾಗಿದೆ. ರಸ್ತೆಯ ಪಕ್ಕದಲ್ಲಿ ಕುಳಿತು ವಿಶ್ರಾಂತಿಸುತ್ತಿದ್ದ ಯುವಕನಿಗೆ ವ್ಯಕ್ತಿಯೊಬ್ಬ ಕಪಾಳಕ್ಕೆ ಹೊಡೆದ ಬೆನ್ನಲ್ಲೇ ಗೊಂಪೊಂದು ಆತನ ಮೇಲೆ ದಾಳಿ ಮಾಡಿದೆ.
ಘಟನೆಯಲ್ಲಿ ಆರೋಪಿಗಳು ಇಕ್ಬಾಲ್‌ನ ತಲೆಗೆ ರಾಡ್‌ನಿಂದ ಹೊಡೆದು ಹತ್ಯೆಗೊಳಿಸಿದ್ದಾರೆ ಎಂದು ಆತನ ಸಂಬಂಧಿಕರು ಹೇಳಿದ್ದಾರೆ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಡಲು ನಿರಾಕರಿಸಿದ ಕುಟುಂಬಸ್ಥರು, ಸಮುದಾಯದ ಜನರೊಡನೆ ನಗರದ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಜೈಪುರ ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಜೈಪುರ ಆಡಳಿತವು ಇಕ್ಬಾಲ್ ಕುಟುಂಬಕ್ಕೆ ಪರಿಹಾರವಾಗಿ 50 ಲಕ್ಷ ರೂ., ಉದ್ಯೋಗ ಮತ್ತು ಡೈರಿ ಬೂತ್ ಕೊಡುವುದಾಗಿ ಘೋಷಿಸಿದೆ. ಆರೋಪಿಯನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಕುಟುಂಬದವರು ಒತ್ತಾಯಿಸಿದ್ದು, ಪೊಲೀಸರು ಪ್ರಕರಣದಲ್ಲಿ ಆರು ಜನರ ಮೇಲೆ ಕಣ್ಣಿಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).