ಮದುವೆಯಾಗಲು ಹುಡುಗಿಯ ಆಧಾರ್ ಕಾರ್ಡ್‌ನಲ್ಲಿ ಜನ್ಮದಿನಾಂಕ ಬದಲಿಸಿದ ಪ್ರಿಯಕರ ಅರೆಸ್ಟ್​​!

wedding
ಸಾಂದರ್ಭಿಕ ಚಿತ್ರ
Published on

ಮುಂಬೈ: ಮದುವೆಯಾಗಲು ಪ್ಲ್ಯಾನ್ ಮಾಡಿದ ಗೆಳೆಯ ಆಕೆಯ ಆಧಾರ್ ಕಾರ್ಡ್‌ನಲ್ಲಿ  ಜನ್ಮದಿನಾಂಕವನ್ನು ಬದಲಿಸಿ ಮದುವೆಯಾಗಿದ್ದಾನೆ. ಈತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.‌

23ರ ಹರೆಯದ ಆರೋಪಿ ಮತ್ತು ಯುವತಿ ಮದುವೆಯಾಗಿ ಕಾನೂನು ಪ್ರಕ್ರಿಯೆಗಾಗಿ ಪೊಲೀಸ್ ಠಾಣೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ನಾವು ಹುಡುಗಿಯ ತಂದೆಗೆ ಕರೆ ಮಾಡಿದಾಗ ಆಕೆಯ ವಯಸ್ಸಿನ ವ್ಯತ್ಯಾಸವು ಬಹಿರಂಗವಾಗಿದೆ.

ದಹಿಸರ್ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಂದೆ ನೀಡಿದ ದೂರಿನ ಪ್ರಕಾರ ಆಕೆ 2006 ಮೇ 7ರಂದು ಜನಿಸಿದಳು. ಆದರೆ ಆರೋಪಿಯು ಆಧಾರ್ ಕಾರ್ಡ್‌ನಲ್ಲಿ ಅದನ್ನು 2004 ಮಾರ್ಚ್ 12ಎಂದು ಬದಲಾಯಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆಕೆಯ ತಂದೆ ದಹಿಸರ್ ಪೂರ್ವದ ರಾವಲ್ಪಾಡಾದಲ್ಲಿನ ಶಾಲೆಯಲ್ಲಿ ನೀಡಿದ ಆಕೆಯ ಮೂಲ ಜನನ ಪ್ರಮಾಣಪತ್ರವನ್ನು ಪೊಲೀಸರಿಗೆ ನೀಡಿದರು. ಹುಡುಗಿ ತಾನು ವಯಸ್ಕ ಎಂದು ತೋರಿಸಲು ಆಧಾರ್ ಕೇಂದ್ರದಲ್ಲಿ ಜನ್ಮ ದಿನಾಂಕವನ್ನು ಬದಲಾಯಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ದಹಿಸರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net