ಅಪ್ರಾಪ್ತ ಮಲ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ಆರೋಪಿ ಬಂಧನ

rape pic
Published on

ರಾಜಸ್ತಾನ: ಅಪ್ರಾಪ್ತ ಮಲ ಮಗಳ ಮೇಲೆ ಅತ್ಯಾಚಾರ ಎಸಗಿ, ಮತ್ತೋರ್ವ ಮಲ ಮಗಳ ಮೇಲೆ ಕಾಮುಕ ಕಣ್ಣು ಬೀರಿದ್ದ ಪಾಪಿ ತಂದೆಯನ್ನು ರಾಜಸ್ತಾನದ ಅಲ್ವಾರ್ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಇಬ್ಬರು ಬಾಲಕಿಯರ ತಂದೆ ಕ್ಯಾನ್ಸರ್ ಕಾಯಿಲೆಯಿಂದ ಸಾವಿಗೀಡಾಗಿದ್ದರು. ಬಾಲಕಿಯರ ತಾಯಿ, ಆರೋಪಿ ಜೊತೆ ಮೂರು ವರ್ಷಗಳ ಹಿಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು.

ಕಳೆದ ಕೆಲ ದಿನಗಳಿಂದ ಆರೋಪಿ ತಂದೆ, ಮಲ ಮಕ್ಕಳ ಮೇಲೆ ಎಸಗುತ್ತಿರುವ ಕಿರುಕುಳ ನೋಡಿದ ತಾಯಿ ತನ್ನ ಸಂಬಂಧಿಕರ ಮನೆಗೆ ಕಳಿಸುತ್ತಾರೆ. ನಂತರ ಅವರನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಸೇರಿಸುತ್ತಾರೆ.

ಅಲ್ಲಿನ ಸಿಬ್ಬಂದಿಗೆ ತಮಗಾದ ಕಿರುಕುಳದ ಬಗ್ಗೆ ಮಕ್ಕಳು ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸಾಂತ್ವಾನ ಕೇಂದ್ರದ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೇವಲ 24 ಗಂಟೆ ಒಳಗೆ ಆರೋಪಿಯನ್ನು ಬಂಧಿಸಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net